ಪುತ್ತೂರು: ಶಿವಧ್ವಜ್ ಶೆಟ್ಟಿ ನಿರ್ದೇಶನದ, ಅಡ್ಯಾರ್ ಮಾಧವ ನಾಯಕ್ ಅರ್ಪಿಸುವ ಈಶ್ವರಿದಾಸ್ ಶೆಟ್ಟಿ ಹಾಗೂ ರಾಜೇಶ್ವರಿ ರೈ ನಿರ್ಮಾಣದ ತುಳು ಚಲನಚಿತ್ರ ಕೊರಮ್ಮ ಸುರತ್ಕಲ್ ಗ್ಯಾಲಕ್ಸಿ ಥಿಯೇಟರ್‌ನಲ್ಲಿ 25 ದಿನವನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಕಲಾವಿದರು, ತಂತ್ರಜ್ಞರು ಹಾಗೂ ಶ್ರಮವಹಿಸಿದ ಚಿತ್ರ ತಂಡವನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದರಾದ ಕಾಸರಗೋಡು ಚಿನ್ನ, ಜಗನ್ನಾಥ ಬಾಳ, ನಿತ್ಯಾನಂದ ಪೈ, ಕುದ್ರೋಳಿ ಗಣೇಶ್, ಬೋಜರಾಜ್ ವಾಮಂಜೂರು ಸೇರಿದಂತೆ ತುಳು ಸಿನಿಮಾದ ಹಿರಿಯ ಕಲಾವಿದರು ಮಂಗಳೂರಿನ ಗಣ್ಯರು ಹಾಗೂ ಹಲವಾರು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಹಿಂದಿನ ಕಾಲದ ನಮ್ಮ ಸಂಸ್ಕತಿ ಪರಂಪರೆ ಹೇಗಿತ್ತು ಎಂಬ ನೈಜ ಕಥೆಯಾಧರಿಸಿ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸದಭಿರುಚಿಯ ತುಳು ಚಿತ್ರವನ್ನು ನಮ್ಮ ಜನತೆಗೆ ನೀಡಬೇಕೆಂಬ ಸದುದ್ದೇಶದಿಂದ ಈ ಚಿತ್ರವನ್ನು ಮಾಡಿದ್ದೇನೆ. ಇದನ್ನು ಒಪ್ಪಿ ಸ್ವೀಕರಿಸಿ 25 ದಿನಗಳ ಕಾಲ ಚಿತ್ರ ಪ್ರದರ್ಶನ ನೀಡಲು ಕಾರಣೀಭೂತರಾದ ತುಳು ನಾಡಿನ ಜನತೆಗೆ ಮನದಾಳದ ಕೃತಜ್ಞತೆ ಸಲ್ಲಿಸುವುದಾಗಿ ನಟ, ನಿರ್ಮಾಪಕ ಶಿವಧ್ವಜ್ ಶೆಟ್ಟಿ ಹೇಳಿದ್ದಾರೆ.
-,