ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ಕುಂಞಿ ಬಾಬ ಆಯ್ಕೆ

0

ಪುತ್ತೂರು: ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ಕುಂಞಿ ಬಾಬ ಆಯ್ಕೆಯಾಗಿದ್ದಾರೆ. ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ರಝಾಕ್ ಕೆನರಾರವರು ಸುಳ್ಯ ವಿಧಾನಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.


ಉಪಾಧ್ಯಕ್ಷರಾಗಿ ಇಕ್ಬಾಲ್ ಕೆನರಾ, ಕಾರ್ಯದರ್ಶಿಯಾಗಿ ರಫೀಕ್ ಪಿ ,ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಸರ್ವೆ, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಯೂಸುಫ್ ಮಡಿಕೇರಿ, ಬಶೀರ್ ಕಾಯರ್ಗ, ನಾಸಿರ್ ಎಸ್ ಎಂ ಸಮಹಾದಿ, ಸುಲೈಮಾನ್ ಪಿ ಪಣೆಮಜಲು ಆಯ್ಕೆಯಾದರು.ಚುನಾವಣಾ ವೀಕ್ಷಕರಾಗಿದ್ದ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಸದಸ್ಯ ಉಸ್ಮಾನ್ ಪೇರಮೊಗರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟು ನೂತನ ಪದಾದಕಾರಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here