ನಂಬರ್ ಪ್ಲೇಟ್ ಕನ್ನಡ ಚಲನ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ

0

  • ಪುತ್ತೂರು ಆಸುಪಾಸುಗಳಲ್ಲಿ ಚಿತ್ರೀಕರಣ
  • ನಾಯಕ ನಟನಾಗಿ ಪುತ್ತೂರಿನ ಆರ್ಯನ್, ನಟಿಯಾಗಿ ಕೀರ್ತಿ ಗೌಡ

ಪುತ್ತೂರು: ಶ್ರೀ ಮೇಘವರ್ಣ ಮೂವೀಸ್ ಫ್ರೆಂಡ್ಸ್ ಅರ್ಪಿಸುವ ಡ್ರೀಮ್ ಕ್ಯಾರ‍್ಸ್ ಪುತ್ತೂರು ಇದರ ಸಹಯೋಗದೊಂದಿಗೆ `ನಂಬರ್ ಪ್ಲೇಟ್’ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದೆ. ಇನ್ನು ಸುಮಾರು ಒಂದು ತಿಂಗಳ ಕಾಲ ಪುತ್ತೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ. ಬಳಿಕ ಬೆಂಗಳೂರು, ತುಮಕೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರಕತೆ ಸಂಭಾಷಣೆ ನಿರ್ದೇಶನ ಗಂಗರಾಜ್ ಪಿ.ಆರ್. ತಿಳಿಸಿದ್ದಾರೆ.

ಸೆ.11ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ಪನಿಕ ಕಥೆಯನ್ನು ಹೊಂದಿರುವ ನಂಬರ್ ಪ್ಲೇಟ್ ಚಲನಚಿತ್ರದಲ್ಲಿ ಹಾರರ್, ಕಾಮಿಡಿ ಎಲ್ಲವೂ ಇದೆ. ಕುಟುಂಬ ಸಮೇತ ವೀಕ್ಷಿಸುವ ಚಲನ ಚಿತ್ರವಾಗಿದೆ. ಚಿತ್ರ ನಾಯಕ ನಟನಾಗಿ ಪುತ್ತೂರಿನವರೇ ಆಗಿರುವ ಆರ್ಯನ್, ನಾಯಕಿ ನಟಿಯಾಗಿ ಕೀರ್ತಿ ಗೌಡ ಹಾಗೂ ಖಳ ನಾಯಕನಾಗಿ ವಿಜಯ ಸೂರ್ಯ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಸ್ನೇಹಿತನಿಗೆ ಮದುವೆ ಮಾಡಲು ಹೊರಟ ತಂಡ, ದಟ್ಟ ಕಾಡಿನ ಮಧ್ಯೆ ಸಿಲುಕಿ ಅವರು ಅನುಭವಿಸುವ ಕಷ್ಟ ಮೊದಲಾದ ಅದ್ಭುತ ಸಂಗತಿಗಳನ್ನು ಚಿತ್ರ ಹೊಂದಿದೆ. 4 ಸಾಂಗ್, 4 ಫೈಟಿಂಗ್‌ಗಳನ್ನು ಒಳಗೊಂಡಿರುವ ಈ ಚಿತ್ರವು ಮುಂದಿನ ಜನವರಿ – ಮಾರ್ಚ್ ವೇಳೆಗೆ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ತಿಳಿಸಿದರು.

ನಾಯಕ ನಟ ಆರ್ಯನ್ ಮಾತನಾಡಿ, ಈ ಹಿಂದೆ ಮೂರು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು ನಂಬರ್ ಪ್ಲೇಟ್ ನನ್ನ ನಾಲ್ಕನೇ ಚಿತ್ರವಾಗಿದೆ. ಈ ಹಿಂದೆ ವೇಷಧಾರಿ, ಗ್ರೂಫಿ ಚಿತ್ರಗಳು ತೆರೆ ಕಂಡಿದೆ. ಮೂರನೇ ಚಿತ್ರ ಶತ್ರುಘ್ನ ಚಿತ್ರೀಕರಣ ಹಂತದಲ್ಲಿದೆ. ಇದೀಗ ನಾಲ್ಕನೇ ಚಿತ್ರದ ಚಿತ್ರೀಕರಣ ನಡೆಯಲಿದೆ. ಮುಂದಿನ ದಿನಗಳಲ್ಲಿ ತುಳು ಚಿತ್ರದಲ್ಲಿ ನಟಿಸುವ ಇರಾದೆಯಿದ್ದು, ಅದಕ್ಕಾಗಿ ಈಗಾಗಲೇ ನಾನೇ ಸ್ವತಃ ಕಥೆ ಸಿದ್ದಪಡಿಸಿರುವುದಾಗಿ ಅವರು ತಿಳಿಸಿದರು. ನಾಯಕಿ ನಟಿ ಕೀರ್ತಿ ಗೌಡ ಮಾತನಾಡಿ, ಈ ಹಿಂದೆ ಹಲವು ಆಲ್ಬಮ್‌ಸಾಂಗ್‌ಗಳಲ್ಲಿ ನಟಿಸಿದ್ದು ಇದೀಗ ನಾಯಕಿ ನಟಿಯಾಗಿ ನಂಬರ್ ಪ್ಲೇಟ್ ಚಿತ್ರದಲ್ಲಿ ಮೊದಲ ನಟಿಸುತ್ತಿರುವುದಾಗಿ ತಿಳಿಸಿದರು.

ಖಳನಟ ವಿಜಯ ಸೂರ್ಯ ಮಾತನಾಡಿ, ನಂಬರ್ ಪ್ಲೇಟ್ ನನ್ನ 11ನೇ ಚಿತ್ರ. ಹೊಸ ಪ್ರಯತ್ನದಲ್ಲಿ ಚಿತ್ರೀಕರಣ ಸಾಗುತ್ತಿದೆ. ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಕೆಮರಾಮ್ಯಾನ್ ರವಿ ರಾಮದುರ್ಗಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here