ಪುತ್ತೂರು ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

0

ಪ್ರತ್ತೂರು : ಪ್ರತಿಷ್ಟಿತ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ಪುತ್ತೂರು ಇದರ ವತಿಯಿಂದ ಮತ್ತು ಇನ್ನರ್ ವೀಲ್ಹ್ ಕ್ಲಬ್ ಮತ್ತೂರು ಇದರ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರತ್ತೂರು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವು ಸೆ.8 ರಂದು ಒಕ್ಕಲಿಗ ಗೌಡ ಸಮುದಾಯದ ಭವನದ ’ಚುಂಚಶ್ರೀ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಡೆಯಿತು.


2025-26ರ ರೋಟರಿ ಜಿಲ್ಲೆ, 3181 ಗವರ್ನರ್ ಪಿ.ಕೆ ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಿಕ್ಷಕ ವೃತ್ತಿಯ ಹಿರಿಮೆಯನ್ನು ಗುರುತಿಸಿ, ಗೌರವಿಸುವಂತದ್ದು ಶ್ಲಾಘನೀಯ ಕೆಲಸ ಹಾಗೂ ನಿವೃತ್ತ ಶಿಕ್ಷಕರು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸೇರಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಮಾರು 33 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೇ ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಶಿಕ್ಷಕ ಸದಸ್ಯರನ್ನು ಕೂಡ ಗೌರವಿಸಲಾಯಿತು. ಸನ್ಮಾನಿತ ಶಿಕ್ಷಕರ ಪರವಾಗಿ ಜಯಶ್ರೀ ಮತ್ತು ನಾರಾಯಣ ಕೆ. ಅನಿಸಿಕೆ ವ್ಯಕ್ತಪಡಿಸಿದರು.


ಕು. ಇಷಿತಾ ನಾಯರ್ ಮತ್ತು ಕು| ಅರುಂಧತಿ, ಆಚಾರ್ಯ ಪ್ರಾರ್ಥಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಇವರು ಸ್ವಾಗತಿಸಿದರು. ಕಾರ್ಯದರ್ಶಿ ಲೆ| ಸುಜಿತ್ ಡಿ ರೈ ವರದಿ ಮತ್ತು ಪ್ರಕಟಣೆಗಳನ್ನು ವಾಚಿಸಿದರು. ವೃತ್ತಪರ ನಿರ್ದೇಶಕರಾದ ಕ್ಷೇವಿಯರ್ ಡಿಸೋಜಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ವಂದಿಸಿದರು. ಪರಮೇಶ್ವರ ಗೌಡ ಮತ್ತು ಸುರೇಶ್ ಶೆಟ್ಟಿ, ವಸಂತ ವೀರಮಂಗಲ ಕಾರ್ಯಕ್ರಮ ನಿರ್ವಹಿಸಿದರು. ಒಟ್ಟು ಕಾರ್ಯಕ್ರಮವನ್ನು ಚಿದಾನಂದ ಬೈಲಾಡಿಯವರು ಸಂಯೋಜಿಸಿದ್ದರು. ಡಾ ಎಮ್ ಎಸ್ ಭಟ್, ಸುರೇಶ್ ಶೆಟ್ಟಿ, ರಾಮ್ ಭಟ್ ಪಿ, ಡಾ. ಶ್ರೀಪತಿ ರಾವ್, ಡಾ. ಶ್ರೀ ಪ್ರಕಾಶ್, ಕ್ಷೇವಿಯರ್ ಡಿ ಸೋಜಾ, ಪ್ರೇಮಾನಂದ, ಬಾಲಕೃಷ್ಣ ಆಚಾರ್ಯ, ದತ್ತಾತ್ರೇಯ ರಾವ್ ಪ್ರೀತ ಎ, ಕಿಷನ್ ಬಿ.ವಿ, ಡಾ. ಗೋಪಿನಾಥ ಪೈ, ಪ್ರಕಾಶ್ ಆಚಾರ್ಯ, ಸುಬ್ಬಪ್ಪ ಕೈಕಂಬ, ಚಿದಾನಂದ ಬೈಲಾಡಿ ಸಹಕರಿಸಿದರು.

LEAVE A REPLY

Please enter your comment!
Please enter your name here