ಪುತ್ತೂರು ಶ್ರೀ ಶಾರದಾ ಭಜನಾ ಮಂದಿರ: ನವರಾತ್ರಿ ಉತ್ಸವ ಪೂರ್ವಭಾವಿ ಸಭೆ

0


ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಸಭೆಯು ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಇವರ ನೇತೃತ್ವದಲ್ಲಿ ಸೆ.12ರಂದು ಸಂಜೆ ಜರಗಿತು.
ಅ.15ರಂದು ನವರಾತ್ರಿ ಪ್ರಾರಂಭಗೊಳ್ಳಲಿದ್ದು, ಅ.20ರಂದು ಬೆಳಿಗ್ಗೆ ಗಣಹೋಮ, ಶಾರದಾ ವಿಗ್ರಹ ಪ್ರತಿಷ್ಠೆ, ಅ.24ರಂದು ಬೆಳಿಗ್ಗೆ ಅಕ್ಷರಾಭ್ಯಾಸ, ಸಂಜೆ 5ರಿಂದ ಶಾರದಾ ವಿಗ್ರಹದ ಶೋಭಾಯಾತ್ರೆಯು ವಿವಿಧ ವಾದ್ಯ ಮೇಳ, ಕುಣಿತ ಭಜನೆಯೊಂದಿಗೆ ಭಜನಾ ಮಂದಿರದಿಂದ ಪ್ರಾರಂಭಗೊಂದು ಬೊಳುವಾರು ಆಂಜನೇಯ ಮಂತ್ರಾಲಯದವರೆಗೆ ನಂತರ ತಿರುಗಿ ಮುಖ್ಯರಸ್ತೆ, ಬಸ್ ನಿಲ್ದಾಣ ದರ್ಬೆ, ಪರ್ಲಡ್ಕ, ಕೋರ್ಟುರಸ್ತೆಯಾಗಿ ಮುಖ್ಯರಸ್ತೆಗೆ ಬಂದು ವೆಂಕಟರಮಣ ದೇವಳದ ಬಳಿಯಿಂದ ಮಹಾಲಿಂಗೇಶ್ವರ ದೇವಳದ ಮಾರುಗದ್ದೆಯಲ್ಲಿರುವ ಬಾವಿಯಲ್ಲಿ ಜಲಸ್ಥಂಭನಗೊಳ್ಳಲಿರುವುದು. ಈ ಸಂದರ್ಭದಲ್ಲಿ ಹಾಜರಿರುವ ಎಲ್ಲಾ ವೇಷಧಾರಿಗಳನ್ನು ಮಂದಿರದಲ್ಲಿ ಪೂಜೆಯ ಬಳಿಕ ಶಾಲು ಹಾಕಿ ಗೌರವಿಸಿ ಪ್ರಸಾದ ನೀಡಲಾಗುವುದು. ಪ್ರತಿದಿನ ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 7.30ರಿಂದ ಭಜನೆ, 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಳಿರುವುದು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ, ಸಂಚಾಲಕ ಪಿ.ಜಿ. ಜಗನ್ನಿವಾಸ್ ರಾವ್, ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿ ಗೋಪಾಲಕೃಷ್ಣ ಈಶ, ಉಪಾಧ್ಯಕ್ಷ ನಯನಾ ರೈ, ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ್ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ತಾರಾನಾಥ್, ಉಪಾಧ್ಯಕ್ಷ ಗೋಪಾಲ್ ನಾಯ್ಕ್, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರ ತಂಡದ ಸದಸ್ಯರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here