




ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವ ಸಮಿತಿಯ ಸಭೆಯು ರಾಜೇಶ್ ಬನ್ನೂರು ಅಧ್ಯಕ್ಷತೆಯಲ್ಲಿ ಸೆ.15ರಂದು ಸಂಜೆ ನಡೆಯಿತು. ಸಭೆಯಲ್ಲಿ ವಿವಿಧ ಸಮಿತಿಯ ಜವಾಬ್ದಾರಿಗಳನ್ನು ನೀಡಲಾಯಿತು. ಮೆರವಣಿಗೆಯ ಸಂಚಾಲಕರಾಗಿ ಪದ್ಮಶ್ರೀ ಸೋಲಾರ್‌ನ ಸೀತಾರಾಮ ರೈ ಕೆದಂಬಾಡಿಗುತ್ತುರವರನ್ನು ಆಯ್ಕೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 15 ತಂಡಗಳು ಹೆಸರು ನೋಂದಾಯಿಸಿದ್ದು ನವರಾತ್ರಿಯಂದು ಪ್ರತಿದಿನ ಸಂಜೆಯಿಂದ ಆರಂಭಗೊಳ್ಳಲಿದೆ. ಸಭೆಯಲ್ಲಿ ಉತ್ಸವ ಸಮಿತಿ ಸಂಚಾಲಕ ಪಿ.ಜಿ. ಜಗನ್ನಿವಾಸ್ ರಾವ್, ಮಂದಿರ ಅಧ್ಯಕ್ಷ ಸಾಯಿರಾಮ್ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರಾನಾಥ್, ಉಪಾಧ್ಯಕ್ಷ ಗೋಪಾಲ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.












