ಪುತ್ತೂರು: ಮುಖ್ಯರಸ್ತೆಯ ಅಮರ್ ಸಂಕೀರ್ಣದಲ್ಲಿ ಮಹಾವೀರ್ ಜೈನ್ ಮಾಲೀಕತ್ವದ ಅಗಲ್ಪಾಡಿ ಟೂರ್ ಆ್ಯಂಡ್ ಟ್ರಾವೆಲ್ಸ್ ಸೆ.27ರಂದು ಅಧಿಕೃತ ಶುಭಾರಂಭಗೊಂಡಿತು.
ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರಾರಂಭಗೊಂಡಿರುವಂತಹ ಸಂಸ್ಥೆಯಲ್ಲಿ ಸೇವಾ ಮನೋಭಾವನೆ ಹೆಚ್ಚಿರಲಿ ಜೊತೆಗೆ ಪಕ್ಷತೀತಾ ವ್ಯವಹಾರ ನಡೆಯಲಿಯೆಂದರಲ್ಲದೇ, ಇಲ್ಲಿಗೆ ಬರುವಂಥಹ ಜನರು ಸಂಸ್ಥೆಯ ಸೇವೆಯನ್ನು ಮೆಚ್ಚಿ, ಮತ್ತೆ-ಮತ್ತೆ ಸಂಪರ್ಕಕ್ಕೆ ಬರೋ ಮೂಲಕ ದೊಡ್ಡ ಮಟ್ಟದ ಎಜೆನ್ಸಿಯಾಗಿ ಹೊರಹೊಮ್ಮಲಿಯೆಂದು ಆಶಯ ವ್ಯಕ್ತಪಡಿಸಿದ್ದರು.
ದೀಪ ಪ್ರಜ್ವಲನೆ ನೆರವೇರಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ , ಮುಖ್ಯವಾಗಿ ಸೇವೆಯಲ್ಲಿ ಸಮರ್ಪಣಾ ಮನೋಭಾವನೆ ಇರಲಿ. ಪ್ರವಾಸ ಆಯೋಜನೆ ಕಾರ್ಯ ಸುಲಭ ಕೆಲಸವಲ್ಲ ,ಇಲ್ಲಿ ಹೊಂದಾಣಿಕೆಯೂ ಕೂಡ ಬಲು ಮುಖ್ಯ ಜೊತೆಗೆ ಗುಣಮಟ್ಟದ ಸೇವೆಯೂ ಇರಲಿಯೆಂದರಲ್ಲದೇ , ಈ ವೇಳೆಯಿಂದಲ್ಲೇ ಸಂಸ್ಥೆ ಪ್ರಚಾರ ಪಡೆಯುವಲ್ಲೂ ಯಶಸ್ಸು ಕಾಣಲಿಯೆಂದೂ ಹಾರೈಸಿದರು.
ಎಐಸಿಸಿಟಿ ಯು ಅಧ್ಯಕ್ಷ ರಾಮಣ್ಣ ವಿಟ್ಲ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ವಡ್ಯ ಹಾಗೂ ಕಾರ್ಯದರ್ಶಿ ಸೈಯ್ಯದ್ ಉಬೇದುಲ್ಲಾ ಬನ್ನೂರು, ನರಿಮೊಗರು ಬ್ಲಾಕ್ ಕಾಂಗ್ರೆಸ್ ಘಟಕ ಅಧ್ಯಕ್ಷ ಪ್ರಕಾಶ್, ಕುಲಾಲ್ ಸಂಘದ ಕ್ರೀಡಾ ಕಾರ್ಯದರ್ಶಿ ಪ್ರಕಾಶ್ ಕುಲಾಲ್, ಅಶ್ವಿನ್ ಪೈ ಕೂರ್ನಡ್ಕ ಹಾಗೂ ಎಐಸಿಸಿಟಿಯು ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ದಿನೇಶ್ ಆಚಾರ್ಯ ಸಹಿತ ಮತ್ತಿತರರು ಇದ್ದರು.
ಮಾಲೀಕ ಮಹಾವೀರ್ ಜೈನ್ ಅತಿಥಿಗಳನ್ನೆಲ್ಲರನ್ನೂ ಸ್ವಾಗತಿಸಿ ಮಾತನಾಡಿ , ಈ ದಿನ (ಸೆ.27) ಸುಮಾರು 42 ಮಂದಿ ಕೊಳ್ತಿಗೆ ಗ್ರಾಮದ ನಿವಾಸಿಗಳೊಡನೆ ಪ್ರಥಮ ಪ್ರವಾಸ ಆರಂಭಗೊಂಡು ಸಿಗಂದೂರು ,ಜೋಗ ಹಾಗೂ ಕೊಲ್ಲೂರು ಸ್ಥಳಗಳಿಗೆ ಬೇಟಿಯಾಗಲಿದ್ದು , ಪ್ರತಿ ಸೋಮವಾರ ಹಾಗೂ ಶುಕ್ರವಾರ ತಿರುಪತಿ ಪ್ರವಾಸವೂ ಪ್ರಾರಂಭಗೊಳ್ಳಲಿದೆ. ಆಸಕ್ತರು ಕಛೇರಿ ಸಂಖ್ಯೆ 9448094428 ಸಂಪರ್ಕಿಸುವಂತೆ ವಂದಿಸಿ , ಸಹಕಾರ ನೀಡುವಂತೆ ವಿನಂತಿಸಿದರು.