ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕರಿಂದ ಪ್ರಾರ್ಥನೆ

0

ಪುತ್ತೂರು: ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ‌ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಅವರು ಕೋಡಿಂಬಾಡಿ ಶ್ರೀ‌ಮಹಿಷ‌ಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಥಮ ಭಾರಿಗೆ ರಾಜ್ಯದ ರಾಜಧಾನಿಯಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದೆ. ಕಂಬಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ ಸಿದ್ದತಾ ಕೆಲಸಗಳು ಆರಂಭಗೊಂಡಿದೆ. ಕಂಬಳವು ಅಭೂತಪೂರ್ವ ಯಶಸ್ವಿಯಾಗಲಿ ಎಂದು ತನ್ನ ಊರಿನ ದೇವಾಳಯದಲ್ಲಿ ಶಾಸಕರು ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here