34 ನೆಕ್ಕಿಲಾಡಿಯಲ್ಲಿ ವಿಶೇಷ ಗ್ರಾಮ ಸಭೆ, ಸನ್ಮಾನ

0


ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಅ.3ರಂದು ವಿಶೇಷ ಗ್ರಾಮ ಸಭೆ ಹಾಗೂ ಸ್ವಚ್ಛತಾ ಕೆಲಸಗಳಿಗೆ ಸಹಕರಿಸಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ವೇದಾವತಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲಾಯಿತು. ಈ ಸಂದರ್ಭ ಸ್ವಚ್ಛತಾ ಸಿಬ್ಬಂದಿಗೆ ಹಾಗೂ ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾದ ಸಂಸ್ಥೆಗಳಾದ ರಾಜಶ್ರೀ ಅಂಬೆಲ, ನಮ್ಮೂರು-ನೆಕ್ಕಿಲಾಡಿ ಹಾಗೂ ನಮ್ಮೂರು-ನಮ್ಮವರು ಮೈಂದಡ್ಕ ಸಂಸ್ಥೆಗಳು ಸೇರಿದಂತೆ ಸಂಜೀವಿನಿ ಒಕ್ಕೂಟ, ಆರೋಗ್ಯ ಇಲಾಖೆಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಗೀತಾ, ರತ್ನಾವತಿ, ತುಳಸಿ, ಸಂಜೀವಿನಿ ಒಕ್ಕೂಟದ ಎಂಬಿಕೆ ಪಾವನಾ, ನಿವೃತ ಯೋಧ ಪುರುಷೋತ್ತಮ ನಾಯ್ಕ, ಸ್ವಚ್ಛ ಭೂಮಿ ರೀಸೋರ್ಸ್ ಮೆನೇಜ್‌ಮೆಂಟ್‌ನ ನಿರ್ದೇಶಕರಾದ ಸತೀಶ, ರವಿ, ಸದಾನಂದ ನೆಕ್ಕಿಲಾಡಿ, ಜೆರಾಲ್ಡ್ ಮಸ್ರ‍್ಹೇನಸ್, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಸತೀಶ ಡಿ. ಬಂಗೇರ ಸ್ವಾಗತಿಸಿದರು. ಸಿಬ್ಬಂದಿ ನಿತಿನ್ ವಂದಿಸಿದರು.

LEAVE A REPLY

Please enter your comment!
Please enter your name here