ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು
ನೆಲ್ಯಾಡಿ: ಮೊಬೈಲ್ ನಂಬರ್ ಹ್ಯಾಕ್ ಮಾಡಲಾಗಿದ್ದು, ಹ್ಯಾಕ್ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ, ಆಲಂತಾಯ ಗ್ರಾಮದ ಶಿವಾರು ಮನೆ ನಿವಾಸಿ ಶಿವಪ್ರಸಾದ್‌ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಪ್ರಸಾದ್‌ರವರ ಮೊಬೈಲ್ ನಂ.9535233929ಗೆ ಅ.4ರಂದು ರಾತ್ರಿ 9 ಗಂಟೆಗೆ ಬಂದ ಸಂದೇಶವೊಂದಕ್ಕೆ ಒಕೆ ಕೊಟ್ಟ ಮೇಲೆ ಅವರ ಮೊಬೈಲ್‌ಗೆ ಬರುತ್ತಿರುವ ಮೆಸೇಜ್‌ಗಳು 7993194780ಗೆ ಹೋಗುತ್ತಿವೆ. ಶಿವಪ್ರಸಾದ್‌ರವರ ಮೊಬೈಲ್ ನಂಬರ್‌ಗೆ ಯಾವುದೇ ಸಂದೇಶ ಹಾಗೂ ಕರೆಗಳು ಬಾರದೇ 7993194780ಗೆ ಹೋಗುತ್ತಿವೆ. ಇದರಿಂದ ತುಂಬಾ ತೊಂದರೆಯುಂಟಾಗಿದ್ದು, ಮೊಬೈಲ್ ನಂಬರ್ ಹ್ಯಾಕ್ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಪ್ರಸಾದ್‌ರವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.