ಕನ್ನಡ ಆಲ್ಬಮ್ ಸಾಂಗ್ ʼನನ್ನ ಮನದಲಿ ನೀʼ ಪೋಸ್ಟರ್ ಬಿಡುಗಡೆ

0

ಪುತ್ತೂರು: ಮಾತೃಶ್ರೀ ಕ್ರಿಯೇಷನ್ ಅರ್ಪಿಸುವ ನನ್ನ ಮನದಲಿ ನೀ ಎಂಬ ಕನ್ನಡ ಆಲ್ಬಮ್ ಸಾಂಗ್ ಇದರ ಪೋಸ್ಟರ್ ಮೊಟ್ಟೆತಡ್ಕ ಮಜಲು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಅ.6ರಂದು ಬಿಡುಗಡೆಗೊಳಿಸಲಾಯಿತು. ಆಲ್ಬಮ್ ಸಾಂಗ್ ನ ಮುಖ್ಯ ಭೂಮಿಕೆಯಲ್ಲಿ ವಚನ್ ಎಸ್. ವಿದ್ಯಾ ಪೂಜಾರಿ ಮತ್ತು ಅಕ್ಷಯ್ ಸುಳ್ಯ ಅಭಿನಯಿಸಿದ್ದು,ಹಾಡಿನ ಸಾಹಿತ್ಯವನ್ನು ಪವಿತ್ರ ಪ್ರಭು ಬೆಳ್ಳಾರೆ ಬರೆದಿದ್ದಾರೆ.ಕಥೆ -ಚಿತ್ರಕಥೆ-ಸಂಭಾಷಣೆ- ನಿರ್ದೇಶನವನ್ನು ಪುತ್ತೂರು ಅಶ್ವಥ್ ಎನ್,ನಿರ್ಮಾಣ ಅಶ್ವಿತ್ ಎಮ್,ಛಾಯಾಗ್ರಾಹಣ ಚಿಂತನ್. ಕೆ ಯವರು ಶ್ರಮ ವಹಿಸಿದ್ದಾರೆ.ಈ ಆಲ್ಬಮ್ ಸಾಂಗ್ DREAM CATCHERS ಡ್ರೀಮ್ ಕ್ಯಾಚರ್ಸ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here