ಸವಣೂರು ವಲಯ ಮಟ್ಟದ ಕ್ರೀಡಾಕೂಟ: ಈಡನ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: 2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟವು ಸ.ಉ. ಹಿ. ಪ್ರಾ. ಶಾಲೆ ನರಿಮೊಗರು ಇಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ 17ರ ವಯೋಮಿತಿ ಯ ಬಾಲಕರ ಗುಂಡು ಎಸೆತ ವಿಭಾಗದಲ್ಲಿ ಮುಹಮ್ಮದ್ ಜವಾದ್ ಪ್ರಥಮ ಸ್ಥಾನ, 14ರ ವಯೋಮಿತಿಯ ಬಾಲಕರ ಗುಂಡು ಎಸೆತ ಹಾಗೂ ಚಕ್ರ ಎಸೆತ ವಿಭಾಗದಲ್ಲಿ ಇಹಸ್ಸಾನ್ ಬಿನ್ ಇಬ್ರಾಹಿಂ ಪ್ರಥಮ ಸ್ಥಾನ ಹಾಗೂ ಲಾಂಗ್ ಜಂಪ್ ವಿಭಾಗದಲ್ಲಿ ತೃತೀಯ ಸ್ಥಾನ, 100ಮೀ ಓಟದಲ್ಲಿ ಹಸ್ಸನ್ ನಿಹಾನುಲ್ ಹನೀಫ್ ದ್ವಿತೀಯ ಸ್ಥಾನ, ಹೈ ಜಂಪ್ ವಿಭಾಗದಲ್ಲಿ ಮುಹಮ್ಮದ್ ಆಫ್ರಾಝ್ ತೃತೀಯ ಸ್ಥಾನ, 600ಮೀ ಓಟದಲ್ಲಿ ಶಿಫಾಝ್ ತೃತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಡನ್ ಗ್ಲೋಬಲ್ ಶಾಲೆಯ ಪ್ರಿನ್ಸಿಪಾಲ್ ರಂಝಿ ಮುಹಮ್ಮದ್ ಹಾಗೂ ಶಾಲೆಯ ಆಡಳಿತ ಸಮಿತಿಯು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶ್ವೇತಾ ಕುಮಾರಿ ಹಾಗೂ ಇಮ್ತಿಯಾಝ್ ಸಿ ಎಂ ತರಬೇತುದಾರರಾಗಿದ್ದಾರೆ.

LEAVE A REPLY

Please enter your comment!
Please enter your name here