ಡೊನ್ ಬೊಸ್ಕೊ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ – ನಾವು ಜನರ ಖಾತೆಗೆ ದುಡ್ಡು ಹಾಕಿದ್ದೇವೆ, ನೀವೇನು ಹಾಕಿದ್ದೀರಿ? ಎಂದು ಬಿಜೆಪಿಗರಿಗೆ ಪ್ರಶ್ನೆ ಹಾಕಿದ ಶಾಸಕ ಅಶೋಕ್ ರೈ

0

ಪುತ್ತೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರ ಅಭಿವೃದ್ಧಿಗೆ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ನೀಡಿದೆ. ಈ ಐದು ಗ್ಯಾರಂಟಿಗಳ ಪೈಕಿ ಒಂದಾದ ರೂ.2 ಸಾವಿರದಂತೆ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ಹಾಕುತ್ತಿದ್ದು, ರೂ.740 ಕೋಟಿ ಹಣ ಅಭಿವೃದ್ಧಿಯತ್ತ ವ್ಯಯಿಸುತ್ತಿದೆ. ಆದರೆ ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುವ ಬಿಜೆಪಿಗರು ಬರೀ ಭ್ರಷ್ಟಾಚಾರ ಮಾಡಿದ್ದು ಬಿಟ್ರೆ ಜನರ ಖಾತೆಗೆ ಏನನ್ನು ಹಾಕಿದ್ದಾರೆ ಎಂದು ಶಾಸಕ ಅಶೋಕ್ ರೈಯವರು ಪ್ರಶ್ನಿಸಿದ್ದಾರೆ.
ಅ.8ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿರುವ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ಪುತ್ತೂರಿನ ವಿದ್ಯಾರ್ಥಿ ಸಾಧಕರನ್ನು ಮತ್ತು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಲು ನಡೆಸುತ್ತಿರುವ ‘ಪ್ರತಿಭಾ ಪುರಸ್ಕಾರ-2023’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳನ್ನು ಘೋಷಿಸಿ ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಇಲ್ಲದಂತೆ ಮಾಡಿದ್ದಾರೆ ಎನ್ನುವ ಬಿಜೆಪಿ ಪಕ್ದದ ಆರೋಪ ಸುಳ್ಳು. ಸರಕಾರ ಐದು ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿದೆ. ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಗೆ ಡಿಸೆಂಬರ್‌ನಲ್ಲಿ ಚಾಲನೆ ದೊರೆಯಲಿದೆ. ಮಾತ್ರವಲ್ಲ ಜನರ ಕಣ್ಣೀರೊರೆಸುವ ಕಾರ್ಯ ನಮ್ಮಿಂದ ಹಾಗೂ ಸರಕಾರದಿಂದ ಆಗುತ್ತಿದೆ ಎಂದರು.


ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಸಾಧನೆ ಮಾಡಬೇಕಾದರೆ ಅದರ ಹಿಂದೆ ಪರಿಶ್ರಮವಿರುತ್ತದೆ. ಜೀವನದಲ್ಲಿ ಸಾಧನೆ ಮಾಡಬೇಕಾದರೆ ಛಲವಿರಬೇಕು. ಮಕ್ಕಳ ಸಾಧನೆಯ ಹಿಂದೆ ಹೆತ್ತವರ ಪ್ರೀತಿ, ಪ್ರೇರಣೆ, ಸ್ಪೂರ್ತಿ ಹಾಗೂ ತ್ಯಾಗದ ಫಲವಿದೆ. ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಪ್ರಚುರಪಡಿಸಿ ಸಮಾಜದಲ್ಲಿ ಬೆಳಗುವ ನಕ್ಷತ್ರಗಳಾಗಬೇಕು ಎಂದ ಅವರು ಬಡಜನರ ಶ್ರೇಯೋಭಿವೃದ್ಧಿಗಾಗಿ ಶಾಸಕ ಅಶೋಕ್ ರೈಯವರು ನಿರಂತರ ಶ್ರಮಿಸುತ್ತಾ ಬಂದಿದ್ದಾರೆ. ಭ್ರಷ್ಟಾಚಾರ ಮುಕ್ತ, ಬಡತನ ಮುಕ್ತ ಸಮಾಜದ ನಿರ್ಮಾಣಕ್ಕೆ ಪಣತೊಟ್ಟಿದ್ದು, ಇದು ಯಶಸ್ವಿಯಾಗಲು ದೇವರು ಶಕ್ತಿಯನ್ನು ಕರುಣಿಸಲಿ ಎಂದರು.



ಇದೇ ಸಂದರ್ಭದಲ್ಲಿ ಎಸೆಸ್ಸೆಲ್ಸಿ, ಪಿಯುಸಿ, ಪದವಿ , ಸ್ನಾತಕೋತ್ತರ ಪದವಿಯಲ್ಲಿ ಸಾಧನೆಗೈದ ವಿದ್ಯಾರ್ಥಿ,ವಿದ್ಯಾರ್ಥಿನಿಯರನ್ನುಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಮಾಯಿದೆ ದೇವುಸ್ ಚರ್ಚ್‌ ಹಾಗೂ ಚರ್ಚ್‌ ಅಧೀನದಲ್ಲಿರುವ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ವತಿಯಿಂದ ಶಾಸಕ ಅಶೋಕ್‌ ಕುಮಾರ್‌ ರೈ ಅವರನ್ನು ಸನ್ಮಾನಿಸಲಾಯಿತು.



೩೦೦೦/-ಜಾ

LEAVE A REPLY

Please enter your comment!
Please enter your name here