ಇಂದು ಪುತ್ತೂರಿನ ಕೂರ್ನಡ್ಕದಲ್ಲಿ ಐಡಿಯಲ್‌ ಚಿಕನ್‌ ನ ನೂತನ ಔಟ್‌ಲೆಟ್ ಶುಭಾರಂಭ

0

ಪುತ್ತೂರು: ತಾಜಾ ಮತ್ತು ರುಚಿಕರ ಐಡಿಯಲ್‌ ಚಿಕನ್ ಇದರ 25ನೇ ನೂತನ ಮಾರಾಟ ಶಾಖೆ ಪುತ್ತೂರಿನಲ್ಲಿ ಆರಂಭಗೊಳ್ಳಲಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಗೊಳಪಟ್ಟ ಕೂರ್ನಡ್ಕದ ಕ್ಯಾಂಪ್ಕೊ ಸಮೀಪದ ಮರಿಯಮ್‌ ವಾಣಿಜ್ಯ ಸಂಕೀರ್ಣದಲ್ಲಿ ಐಡಿಯಲ್‌ ಚಿಕನ್‌ ನ ಮಾರಾಟ ಶಾಖೆ ಇಂದು ಶುಭಾರಂಭಗೊಳ್ಳಲಿದ್ದು ಹಾಜಿ ಸೀದಿಕುಂಞ ಬುಳೇರಿಕಟ್ಟೆ ಶಾಖೆಯ ಉದ್ಘಾಟನೆ ಮಾಡಲಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸೈಯದ್‌ ಶರ್ಫುದ್ದೀನ್‌ ತಂಙಲ್‌ ದುವಾರ್ಶೀವಚನ ನೀಡಲಿದ್ದು, ಪ್ರೊವಿಟ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್ (ಐಡಿಯಲ್‌ ಚಿಕನ್) ಇದರ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್‌ ಕುಟಿನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪೀರ್‌ ಮೊಹಲ್ಲಾ ಜಮಾಅತ್‌ ಕಮಿಟಿ ಇದರ ಅಧ್ಯಕ್ಷ ಕೆ ಹೆಚ್‌ ಕಾಸಿಂ ಹಾಜಿ, ನಗರಸಭಾ ಸದಸ್ಯರಾದ ಬಾಲಚಂದ್ರ ಕೆ ಮತ್ತು ಯೂಸೂಫ್‌ ಡ್ರೀಮ್ಸ್‌, ದ.ಕ. ವಕ್ಫ್‌ ಬೋರ್ಡಿನ ಮಾಜಿ ಸದಸ್ಯ ಮಹಮ್ಮದ್‌ ಕುಂಞ ವಿಟ್ಲ, ಎಂ ಫ್ರೆಂಡ್ಸ್ ಚಾರಿಟೇಬಲ್‌ ಟ್ರಸ್ಟ್‌ ನ ಅಧ್ಯಕ್ಷ ಹಾಜಿ ಮಹಮ್ಮದ್‌ ಹನೀಫ್‌, ಬಂಟ್ವಾಳ ತಾಲೂಕು ಜಮ್ಯಿಯತುಲ್‌ ಫಲಾಹ್‌, ಅಧ್ಯಕ್ಷ ರಶೀದ್‌ ವಿಟ್ಲ, ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್‌ ಟಿ ಅಬ್ದುಲ್‌ ರಝಾಕ್‌ ಹಾಜಿ, ದರ್ಬೆ ಮಹಮ್ಮದೀಯಾ ಮಸೀದಿ ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಆಝಾದ್‌, ಮರೀಲ್‌ ಹನಫಿ ಜುಮಾ ಮಸೀದಿ ಅಧ್ಯಕ್ಷ ರಝಾಕ್‌ ಖಾನ್‌, ಮೊಟ್ಟೆತಡ್ಕ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್‌ ಮತ್ತು ವಾಣಿಜ್ಯ ಸಂಕೀರ್ಣದ ಮಾಲೀಕರಾದ ಮಹಮ್ಮದ್‌ ಹಾರೀಸ್‌ ಭಾಗವಹಿಸಲಿದ್ದಾರೆ.

ಕರ್ನಾಟಕ ಮತ್ತು ಕೇರಳದ ಹಲವೆಡೆ ಶಾಖೆಯನ್ನು ಹೊಂದಿರುವ ಐಡಿಯಲ್‌ ಚಿಕನ್‌ ಹಲಾಲ್‌ ಸರ್ಟಿಫಿಕೇಶನ್‌ ಹೊಂದಿದ್ದು ಶುಚೀಕರಿಸಿದ ಉತ್ತಮ ಗುಣಮಟ್ಟದ ಚಿಕನ್‌ ಪಾರ್ಟ್ಸ್‌ ಮತ್ತು ರೆಡಿ ಟು ಕುಕ್‌ ಚಿಕನ್‌ ಚಿಲ್ಲರೆಯಾಗಿ ಮತ್ತು ರಖಂ ದರದಲ್ಲಿ ಲಭ್ಯವಿದೆ. ಅಲ್ಲದೇ ಫುಲ್ ಚಿಕನ್‌, ಚಿಕನ್‌ ಡ್ರಮ್‌ ಸ್ಟಿಕ್‌, ಚಿಕನ್‌ ಬ್ರೆಸ್ಟ್, ಚಿಕನ್‌ ತೈಸ್‌, ಚಿಕನ್‌ ಮಿನ್ಸ್‌, ಚಿಕನ್‌ ಲಾಲಿಪಾಪ್‌, ಚಿಕನ್‌ ವಿಂಗ್ಸ್‌, ಚಿಕನ್‌ ಫುಲ್‌ ಲೆಗ್‌, ಚಿಕನ್‌ ಗಿಝಾರ್ಡ್‌, ಚಿಕನ್‌ ಲಿವರ್, ಚಿಕನ್‌ ಬ್ಯಾಕ್‌ ಆಂಡ್‌ ನೆಕ್‌, ಚಿಕನ್‌ ಹಾರ್ಟ್, ಚಿಕನ್‌ ಸೂಫ್‌ ಸ್ಟಿಕ್‌,ಚಿಕನ್‌ ಕರಿಕಟ್‌ ಲಭ್ಯವಿದೆ. ಗ್ರಾಹಕರ ಅನುಕೂಲತೆಗಾಗಿ ನಿಗದಿತ ಪರಿಧಿಯೊಳಗೆ ಮನೆಮನೆಗೆ ತಲುಪಿಸುವ ವ್ಯವಸ್ಥೆಯನ್ನು ಹೊಂದಿದ್ದು ಐಡಿಯಲ್‌ ಚಿಕನ್‌ ಆ್ಯಪ್‌ ಬಳಸಿ ಆರ್ಡರ್‌ ಮಾಡಬಹುದಾಗಿದೆ. ಇಂದು ಖರೀದಿದಾರರಿಗೆ 10 ಶೇಕಡ ವಿಶೇಷ ರಿಯಾಯಿತಿ ಇದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here