ಅ.14,15: ಕೋಚಕಟ್ಟೆ ನೂರುಲ್ ಹುದಾ ಅರೇಬಿಕ್ ಮದ್ರಸದಲ್ಲಿ ಮಿಲಾದ್ ಸಮಾವೇಶ, ಧಾರ್ಮಿಕ ಮತ ಪ್ರವಚನ

0

ಪೆರಾಬೆ: ಕುಂತೂರು ಬೇಳ್ಪಾಡಿ ಎ ಮತ್ತು ಬಿ ಜುಮಾ ಮಸೀದಿಯ ಅಂಗ ಸಂಸ್ಥೆಯಾದ ಕೋಚಕಟ್ಟೆ ನೂರುಲ್ ಹುದಾ ಮದ್ರಸದ ಆಶ್ರಯದಲ್ಲಿ ಪ್ರವಾದಿ(ಸ.ಅ.) ತಂಙಳ್‌ರವರ ಜನ್ಮ ದಿನಾಚರಣೆ ಅಂಗವಾಗಿ ಮಿಲಾದ್ ಸಮಾವೇಶ ಹಾಗೂ 2 ದಿವಸಗಳ ಧಾರ್ಮಿಕ ಮತ ಪ್ರವಚನ ಮದ್ರಸ ಅಧ್ಯಕ್ಷ ಬಶೀರ್ ಕೆ.ಪಿ. ಅಧ್ಯಕ್ಷತೆಯಲ್ಲಿ ಅ.14 ಮತ್ತು 15ರಂದು ಕೋಚಕಟ್ಟೆ ನೂರುಲ್ ಹುದಾ ಮದ್ರಸ ವಠಾರದಲ್ಲಿ ನಡೆಯಲಿದೆ.

ಅ.14ರಂದು ಸಂಜೆ ಅಸರ್ ನಮಾಝ್‌ನ ಬಳಿಕ ಕುಂತೂರು ಮುದರ್ರೀಸ್‌ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ, ನಂತರ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಶಿಕ್ಷಕ ಇಮ್ತಿಯಾಝ್ ಸಿ.ಎಂ.ಸ್ವಾಗತ ಭಾಷಣ ಮಾಡಲಿದ್ದು, ಮದ್ರಸ ಪ್ರಧಾನ ಅಧ್ಯಾಪಕ ಫಾರೂಕ್ ದಾರಿಮಿ ರೆಂಜ ಉದ್ಘಾಟಿಸಲಿದ್ದಾರೆ. ನಂತರ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ, ಕುಂತೂರು ದರ್ಸ್ ವಿದ್ಯಾರ್ಥಿಗಳ ಬುರ್ದಾ ಅಲಾಪನೆ ಹಾಗೂ ಕುಂತೂರು ಮುದರ್ರಿಸ್ ಬಹು| ಹಾಜಿ ಮೊಯಿದು ಫೈಝಿ ಉಸ್ತಾದರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.

ಅ.15ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಬಹು| ಅಬ್ದುಲ್ ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್‌ರವರು ದುಶೀರ್ವಚನ ನೀಡಲಿದ್ದಾರೆ. ಗೋಳಿತ್ತೊಟ್ಟು ಖತೀಬರಾದ ಹನೀಫ್ ದಾರಿಮಿಯವರು ಸ್ವಾಗತ ಭಾಷಣ ಮಾಡಲಿದ್ದಾರೆ. ಸ್ಥಳೀಯ ಮುದರ್ರಿಸ್ ಹಾಜಿ ಮೊಯಿದು ಫೈಝಿ ಉದ್ಘಾಟಿಸಲಿದ್ದು, ಮದ್ರಸ ಅಧ್ಯಾಪಕ ಫಾರೂಕ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಖ್ಯಾತ ವಾಗ್ಮಿ, ಬಹುಭಾಷ ಪಂಡಿತ ಬಹು| ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾದಾತುಗಳು, ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಮದ್ರಸ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮಿನ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here