ಸುದ್ದಿ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ
ಬೆಟ್ಟಂಪಾಡಿ: ಪಾಣಾಜೆ ಗ್ರಾಮದ ಒಡ್ಯ ಅಶ್ವತ್ಥ ಕಟ್ಟೆ ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ ಮೊದಲ ವರ್ಷದ ಆಯುಧ ಪೂಜಾ ಸಮಾರಂಭ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.21ರಂದು ಒಡ್ಯದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಣಪತಿ ಹವನ, ಪೂರ್ಣಾಹುತಿಯಾಗಿ ವಾಹನ ಪೂಜೆ ನಡೆಯಲಿದೆ. ನಂತರ ಭಜನಾ ಕಾರ್ಯಕ್ರಮ ಜರಗಲಿದೆ.
ಸಂಜೆ ಸಭಾ ಕಾರ್ಯಕ್ರಮದಲ್ಲಿ ಬಟ್ಯಮೂಲೆ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ನಿವೃತ್ತ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು, ಪಾಣಾಜೆ ಶಾಖಾ ಪುತ್ತೂರು ವಲಯ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಬಿ.ಟಿ. ಪಾಲ್ಗೊಳ್ಳಲಿದ್ದಾರೆ. ಶಿವಪ್ಪ ನಾಯ್ಕ ಮುಂಡಿತ್ತಡ್ಕ, ಮೊಯಿದು ಕುಂಞಿ ಒಡ್ಯ ಹಾಗೂ ಶಂಕರ ರೈ ಬಾಳೆಮೂಲೆ ಗೌರವ ಉಪಸ್ಥಿತಿ ಇರಲಿದ್ದಾರೆ. ಇದೇ ವೇಳೆ ಶೈಕ್ಷಣಿಕ ಸಾಧನೆಗೈದ ಪ್ರತಿಭೆಗಳಿಗೆ ಮತ್ತು ಶಿಕ್ಷಣ ರಂಗದಲ್ಲಿನ ಸೇವೆಗಾಗಿ ಉಸ್ಮಾನ್ ಮಂಚಿ, ಯಕ್ಷಗಾನ ಕಲಾಸೇವೆಗಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆಯವರಿಗೆ ಗೌರವ ಸನ್ಮಾನ ನಡೆಯಲಿದೆ. ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈಭವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ‘ಸಿಟಿ ಗಯ್ಸ್’ ಮಂಗಳೂರು ಇವರಿಂದ ಸಾಂಸ್ಕೃತಿಕ, ರಸಮಂಜರಿ ‘ಡ್ಯಾನ್ಸ್ ನೈಟ್ ಡ್ಯಾನ್ಸ್’ ಕಾರ್ಯಕ್ರಮ ಜರಗಲಿದೆ ಎಂದು ಆಯುಧ ಪೂಜಾ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.