20 ತಿಂಗಳಲ್ಲಿ ಅದೃಷ್ಟವಂತರಿಗೆ ಮನೆ – ವಾಹನ, ಚಿನ್ನ ಸೇರಿದಂತೆ ಹಲವು ಬಹುಮಾನಗಳ ವಿಶಿಷ್ಟ ಯೋಜನೆ – ಉಬಾರ್‌ ಲಕ್ಕೀ ಸ್ಕೀಮ್‌ ನ ಉದ್ಘಾಟನೆ

0

ಪುತ್ತೂರು: ಉಬಾರ್‌ ನ ಇತಿಹಾಸದಲ್ಲಿಯೇ ಮೊದಲ ಭಾರಿ ಎನ್ನುವಂತೆ ಭಾರೀ ಬಹುಮಾನಗಳನ್ನೊಳಗೊಂಡ ಉಬಾರ್‌ ಲಕ್ಕೀ ಸ್ಕೀಮ್‌ ಇದರ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಉಪ್ಪಿನಂಗಡಿಯ ಹೆಚ್‌ ಎಂ ಹಾಲ್‌ ನಲ್ಲಿ ನಡೆಯಿತು.

ಉಪ್ಪಿನಂಗಡಿಯ ಅನುಗ್ರಹ ಕ್ರೆಡಿಟ್‌ ಕೋ ಅಪರೇಟಿವ್‌ ಬ್ಯಾಂಕ್‌ ನ ಅಧ್ಯಕ್ಷ ವಿನ್ಸೆಂಟ್‌ ಪೆರ್ನಾಂಡಿಸ್‌ ಮತ್ತು ಯುವ ಉದ್ಯಮಿ ಶಬ್ಬೀರ್‌ ಕೆಂಪಿ, ಶ್ವೇತ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ವಿನ್ಸೆಂಟ್‌ ಪೆರ್ನಾಂಡಿಸ್‌ ಉಬಾರ್‌ ಲಕ್ಕೀ ಸ್ಕೀಮ್‌ ಉತ್ತಮ ರೀತಿಯಲ್ಲಿ ಕೊನೆಯವರೆಗೂ ನಡೆಯಲಿ ಎಂದು ಶುಭಹಾರೈಸಿದರು. ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ. ರಾಜಾರಾಮ್‌ ಕೆ ಬಿ, ಕಾಂಗ್ರೆಸ್‌ ಪಕ್ಷದ ಮುಖಂಡ ನಝೀರ್‌ ಮಠ, ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ ಪ್ರಾಮಾಣಿಕತೆಯೊಂದಿಗೆ ಎಲ್ಲರ ವಿಶ್ವಾಸ ಗಳಿಸಿ ಸ್ಕೀಮ್‌ ಕೊನೆಯವರೆಗೂ ಮುಂದುವರಿಯಲಿ ಎಂದು ಶುಭಹಾರೈಸಿದರು.

ಶಬ್ಬೀರ್‌ ಕೆಂಪಿ, ರಶೀದ್‌ ಮಠ, ಹೆಚ್‌ ಎಂ ಹಸನ್‌ ಮದ್ದಡ್ಕ, ಆನಿ ಮೆನೇಜಸ್‌, ಸಿರಾಜ್‌ ಕಾರ್ಗಿಲ್‌, ಉಮ್ಮರಬ್ಬ ಕೆ ಎಸ್‌ ಆರ್‌ ಟಿ ಸಿ, ಅಬೂಬಕ್ಕರ್‌ ಪಿ ಹೆಚ್‌, ಇಬ್ರಾಹಿಂ ಪಿ ಹೆಚ್‌, ಕುಶಾಲಪ್ಪ ಪೂಜಾರಿ, ಅಬೂಬಕ್ಕರ್‌ ತುಂಬೆ, ಫಾರೂಕ್‌ ಝಿಂದಗಿ ಉಪ್ಪಿನಂಗಡಿ, ಇಸಾಕ್‌ ಮಠ, ಆಪು ನೆಕ್ಕಿಲಾಡಿ, ಸುನಿಲ್‌, ಸಿದ್ದಿಕ್‌ ಮೇದರಬೆಟ್ಟು, ಇಮ್ರಾನ್‌ ಎವಿ, ಆಶಿಕ್‌ ಕೆಂಪಿ, ಇರ್ಶಾದ್‌ ಯು ಟಿ, ಅನ್ಸಾಫ್‌ ಕರಾಯ, ರಿಯಾಝ್‌ ಉಪ್ಪಿನಂಗಡಿ, ನವಾಝ್‌ ಉಪ್ಪಿನಂಗಡಿ, ಚಂದಣ್ಣ, ವಿದ್ಯಾಲಕ್ಷ್ಮೀ ಪ್ರಭು ಅತಿಥಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಉಬಾರ್‌ ಲಕ್ಕೀ ಸ್ಕೀಮ್‌ ನ ಆಯೋಜಕರಾದ ಸಾದಿಕ್‌ ಮರಕಡ, ಅಶ್ರಫ್‌ ಪಿಲಿಗೂಡು, ಉಮ್ಮರ್‌ ವಳಚಿಲ್‌ ಉಪ್ಪಿನಂಗಡಿ, ಹನೀಫ್‌ ಉಪ್ಪಿನಂಗಡಿ, ತಂಡದ ಇನ್ನೋರ್ವ ಸದಸ್ಯ ರಝಾಕ್‌ ದುಬೈ ಅನುಪಸ್ಥಿತಿಯಲ್ಲಿ ಅತಿಥಿಗಳನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಉಬಾರ್‌ ಲಕ್ಕೀ ಸ್ಕೀಮ್‌ ನಿಮ್ಮ ಕನಸನ್ನು ನನಸಾಗಿಸುವ ಒಂದು ವಿಶಿಷ್ಟ ಯೋಜನೆಯಾಗಿದ್ದು 20 ತಿಂಗಳು 1000 ರೂಪಾಯಿಯಂತೆ ಪಾವತಿಸಿ ಮನೆ, ಮಹೀಂದ್ರ ಥಾರ್, ಹೋಂಡ ಆಕ್ಟೀವಾ, ಬಜಾಜ್‌ ಪಲ್ಸರ್‌, ರೋಯಲ್‌ ಎನ್‌ ಫೀಲ್ಡ್‌, ಬುಲೆಟ್‌ ಬೈಕ್‌ ಸೇರಿದಂತೆ ಹಲವು ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಪ್ರತಿ ತಿಂಗಳ 10ನೇ ತಾರೀಕಿಗೆ ಉಬಾರ್‌ ಲಕ್ಕೀ ಸ್ಕೀಮ್‌ ಕಚೇರಿಯಲ್ಲಿ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಯಲಿದ್ದು ಇದರ ನೇರಪ್ರಸಾರ ಸುದ್ದಿ ಚಾನಲ್ ನಲ್ಲಿ‌ ನೇರಪ್ರಸಾರ ನಡೆಯಲಿದೆ. ಆಸಕ್ತರು ಹೆಸರು ನೊಂದಾಯಿಸುವ ಮೂಲಕ ಸ್ಕೀಮ್‌ ಗೆ ಸೇರ್ಪಡೆಗೊಳ್ಳುವಂತೆ ಆಯೋಜಕರು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here