ಅಧ್ಯಕ್ಷರಾಗಿ ರಫೀಕ್ ಸೋಂಪಾಡಿ; ಕಾರ್ಯದರ್ಶಿ ಸಲೀಂ ಯು.ಎಸ್
ಪುತ್ತೂರು: ಅಲ್ ಇಹ್ಸಾನ್ ಯೂತ್ ಕೌನ್ಸಿಲ್ ಮಾಂತೂರು ಇದರ 24ನೇ ವಾರ್ಷಿಕ ಮಹಾಸಭೆ ಹಾಗೂ ಮೌಲೀದ್ ಪಾರಾಯಣ ಕಾರ್ಯಕ್ರಮ ಮಾಂತೂರು ಬದ್ರಿಯಾ ಮಸ್ಜಿದ್‌ನಲ್ಲಿ ನಡೆಯಿತು. ಚಾಪಲ್ಲ ಮುದರ್ರಿಸ್ ಅಶ್ರಫ್ ಫಾಝಿಲ್ ಬಾಖವಿ ನೇತೃತ್ವದಲ್ಲಿ ಮೌಲೀದ್ ಕಾರ್ಯಕ್ರಮ ನಡೆಯಿತು.
ಮೌಲೀದ್ ಕಾರ್ಯಕ್ರಮದಲ್ಲಿ ಚಾಪಲ್ಲ ಜಮಾಅತ್‌ನ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ, ಮಾಂತೂರು ಮಸ್ಜಿದ್ ಇಮಾಮರಾದ ಸಿದ್ದೀಕ್ ಮುಸ್ಲಿಯಾರ್ ಹಾಗೂ ಜಮಾಹತ್ ಸದಸ್ಯರು, ಊರವರು ಉಪಸ್ಥಿತರಿದ್ದರು.
ನಂತರ ಸಮಿತಿಯ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಅಬ್ದುಲ್ ರಜಾಕ್ ಕೆನರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಿದ್ದೀಕ್ ಮುಸ್ಲಿಯಾರ್ ದುವಾ ನೆರವೇರಿಸಿದರು.
2022-23ನೇ ಸಾಲಿನ ವರದಿ ವಾಚನ ಮತ್ತು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಸಲೀಂ ಯು ಎಸ್ ಮಂಡಿಸಿದರು.
2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ರಫೀಕ್ ಸೋಂಪಾಡಿ, ಕಾರ್ಯದರ್ಶಿಯಾಗಿ ಯು ಎಸ್ ಸಲೀಂ, ಉಪಾಧ್ಯಕ್ಷರಾಗಿ ನಝೀರ್ ಮುಂಡತ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಕುರ್ತಳ ಮತ್ತು ಕಲಂದರ್ ಬಸ್ತಿಮೂಲೆ, ಕೋಶಾಧಿಕಾರಿಯಾಗಿ ಹಮೀದ್ ಸೋಂಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಇಕ್ಬಾಲ್ ಕೆನರಾ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಕಾರಿಯಾ ಮಾಂತುರು, ಎಂ.ಎಸ್ ರಫೀಕ್, ಎಂ.ಎ ರಫೀಕ್, ಬಶೀರ್ ಕೆನರಾ, ಸಮೀರ್ ಅತ್ತಿಕರೆ, ಸಿದ್ದೀಕ್ ಸೋಂಪಾಡಿ, ಕಲೀಲ್ ಮಾಂತೂರು, ಹಾರೀಸ್ ಮಾಂತೂರು, ಕಾಸಿಂ ಮಾಂತೂರು, ಹನೀಫ್ ಮಾಂತೂರು, ಸೈಫುಲ್ಲಾ ಮಾಂತೂರು, ಹನೀಫ್ ಅತ್ತಿಕರೆ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಎಸ್ ಇ.ಅಬ್ದುಲ್ಲ, ಉಮ್ಮರ್ ಸೋಂಪಾಡಿ, ಎಸ್ ಆರ್.ಕರೀಂರವರನ್ನು ನೇಮಕ ಮಾಡಲಾಯಿತು.