ರಾಮಕುಂಜ ಕಿಂಡರ್‌ಗಾರ್ಟನ್‌ನಲ್ಲಿ ಸರಸ್ವತಿ ಆರಾಧನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನಲ್ಲಿ ಆದಿಶಕ್ತಿ, ಜ್ಞಾನಮಾತೆ,ಶಾರದೆ, ವೀಣಾಪಾಣಿ ಮಹಾಸರಸ್ವತಿಯ ಆಚರಣೆ ಶ್ರದ್ಧಾ, ಭಕ್ತಿಯಿಂದ ಮಾಡಲಾಯಿತು.
ವಿದ್ಯಾದೇವತೆಯ ಆರಾಧನೆಯಲ್ಲಿ ಶಾಲಾ ಪುಟಾಣಿಗಳು, ಪೋಷಕರು ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಸಕಲ ಕಲೆಗಳಿಗೂ ಅಧಿದೇವತೆಯಾದ ಸರಸ್ವತಿಯ ಆಶೀರ್ವಾದ ಎಲ್ಲರಿಗೂ ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕವೃಂದ, ಮಕ್ಕಳು, ಪೋಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here