ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಿಸಿದ 31ನೇ ವರ್ಷದ ಶಾರದೋತ್ಸವ

0

ಪುತ್ತೂರು: ಇರ್ದೆ ಶ್ರೀವಿಷ್ಣುಮೂರ್ತಿ ದೇವಾಲಯ ಹಾಗೂ ಶಾರದೋತ್ಸವ ಸಮಿತಿ ಇದರ ವತಿಯಿಂದ ಅ.24ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ 31ನೇ ವರ್ಷದ ಶ್ರೀಶಾರದೋತ್ಸವವು ಸಂಭ್ರಮ ಮನೆ ಮಾಡಿತು.


ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆದ ನವರಾತ್ರಿ ಉತ್ಸವವು ಅ.15ರಿಂದ ಪ್ರಾರಂಭಗೊಂಡು ಪ್ರತಿದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿಶೇಷ ಕಾರ್ತಿಕ ಪೂಜೆ ಹಾಗೂ ದುರ್ಗಾಪೂಜೆಗಳು ಹಾಗೂ ಅ.23ರಂದು ಆಯುಧ ಪೂಜೆಗಳು ನೆರವೇರಿತು.


ಅ.24ರಂದು ನಡೆದ ಶಾರದೋತ್ಸವದಲ್ಲಿ ಅನಂತರಾಮ ಮಡಕುಳ್ಳಾಯ ಮತ್ತು ರಾಧಾಕೃಷ್ಣ ಭಟ್ ಕಕ್ಕೂರು ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಗೊಂಡ ಬಳಿಕ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ, ಸುಳ್ಯಪದವು ಕೊರಗಜ್ಜ ಬಾಲ ಭಜನಾ ಸಂಘದವರಿಂದ ಭಜನೆ ಕಾರ್ಯಕ್ರಮಗಳು ನಂತರ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.


ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶಾರದಾ ಮಾತೆಗೆ ಮಹಾಪೂಜೆಯ ಬಳಿಕ ಶ್ರೀಶಾರದಾ ಮಾತೆಯ ಶೋಭಾಯಾತ್ರೆಯು ಪ್ರಾರಂಭಗೊಂಡಿತು. ದೇವಾಲಯದಿಂದ ಹೊರಟ ಶೋಭಾಯಾತ್ರೆಯು ಇರ್ದೆ-ಜೋಡುಮಾರ್ಗ, ಪೇರಲ್ತಡ್ಕ, ಕದಿಕೆ ಚಾವಡಿಯಾಗಿ ಮಾರ್ಗವಾಗಿ ಸಂಚರಿಸಿ ಬೆಂದ್ರ್‌ತೀರ್ಥದಲ್ಲಿ ಜಲಜಸ್ಥಂಭನಗೊಂಡಿತು.
ಬೈಲಾಡಿ ಶ್ರೀವಿಷ್ಣು ಚಿಣ್ಣರ ಭಜನಾ ತಂಡ, ದೂಮಡ್ಕ ಶ್ರೀ ವಿಷ್ಣು ಮಕ್ಕಳ ಕುಣಿತ ಭಜನಾ ಮಂಡಳಿ, ನಿಡ್ಪಳ್ಳಿ ಶ್ರೀಶಾಂತದುರ್ಗಾ ಭಜನಾ ಮಂಡಳಿ, ಕೋನಡ್ಕ-ಚೂರಿಪದವು ಶೈಲಪುತ್ರಿ ಕುಣಿತ ಭಜನಾ ತಂಡ, ಇರ್ದೆ ಉಪ್ಪಳಿಗೆ ಸಿದ್ಧಿಧಾತ್ರಿ ಮಹಿಳಾ ಕುಣಿತಾ ಭಜನಾ ತಂಡ ಇವರಿಂದ ಕೋಲಾಟ, ಜಾನಪದ ನೃತ್ಯಗಳು, ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳದವರಿಂದ ಚೆಂಡೆ ವಾದನ, ಇರ್ದೆ ಶಿವಾಜಿ ಫ್ರೆಂಡ್ಸ್ ಮತ್ತು ರೆಂಜ ಟೈಗರ‍್ಸ್ ಇವರಿಂದ ಆಕರ್ಷಕ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಮೇಲೈಸಿತು. ರಾತ್ರಿ ದೇವಳದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಂತ್ರಾಕ್ಷತೆಯೊಂದಿಗೆ 31ನೇ ವರ್ಷದ ಶಾರದೋತ್ಸವವು ಸಂಪನ್ನಗೊಂಡಿತು.


ಶಾಸಕ ಅಶೋಕ್ ಕುಮಾರ್ ರೈ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ,ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಶರತ್ ಕುಮಾರ್ ಮಾರ್ಲ ಬಾಲ್ಯೊಟ್ಟುಗುತ್ತು, ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಬೈರಮಜಲು, ಪ್ರಧಾನ ಕಾರ್ಯದರ್ಶಿ ಶೀನಪ್ಪ ನಾಯ್ಕ ಬದಂತಡ್ಕ, ಕಾರ್ಯದರ್ಶಿ ಹರೀಶ್ ಉಪ್ಪಳಿಗೆ, ಜತೆ ಕಾರ್ಯದರ್ಶಿ ಚಂದ್ರ ಬೆಟ್ಟಂಪಾಡಿ, ಕೋಶಾಧಿಕಾರಿ ಲೋಕೇಶ್ ಬಾಳೆಗುಳಿ, ಕಾರ್ತಿಕ್ ಮೇರ್ವೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬಾಲ್ಯೊಟ್ಟುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸಂಘ ಸಂಸ್ಥೆಗಳು ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಶಾರದೋತ್ಸವದಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here