ಕಾವು ತುಡರ್ ಭಜನಾ ಸಂಘದ 8ನೇ ವಾರ್ಷಿಕೋತ್ಸವ – ಭಜನಾ ಕಾರ್ಯಕ್ರಮ-ಕುಣಿತ ಭಜನೆ – ಧಾರ್ಮಿಕ ಸಭೆ-ಸನ್ಮಾನ

0

ಭಗವಂತನನ್ನು ಒಲಿಸಲು ಭಜನೆಯೇ ಸಾರ್ವಕಾಲಿಕ ಸೂತ್ರ-ಮಹೇಶ್ ಕಜೆ
ಭಜನಾ ಸಂಘದಿಂದ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಉದ್ದಿಪನ-ನನ್ಯ
ಮನೆ-ಮನಗಳಲ್ಲಿ ತುಡರ್ ಬೆಳಗಲಿ-ಶೇಷಪ್ಪ ಗೌಡ ನೀರ್ಖಜೆ

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿರುವ ತುಡರ್ ಭಜನಾ ಸಂಘದ 8ನೇ ವಾರ್ಷಿಕೋತ್ಸವ ಸಮಾರಂಭವು ಅ.29ರಂದು ಸಂಜೆ ನನ್ಯ ಜನಮಂಗಲ ಸಭಾಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.


ಭಜನಾ ಕಾರ್ಯಕ್ರಮ:
ಸಂಜೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ತುಡರ್ ಮಾತೃ ಭಜನಾ ಮಂಡಳಿಯ ಗೌರವಾಧ್ಯಕ್ಷೆ ಗೀತಾ ಮನಮೋಹನ ಬನಾರಿ, ಅಧ್ಯಕ್ಷೆ ಶ್ಯಾಮಲಾ ಪೆರ್ನಾಜೆಯವರು ದೀಪ ಪ್ರಜ್ವಲನೆ ಮಾಡಿದರು. ಬಳಿಕ ತುಡರ್ ಭಜನಾ ಸಂಘ ಮತ್ತು ಮಾತೃ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ತುಡರ್ ಸುಜ್ಞಾನ ಮಕ್ಕಳ ಭಜನಾ ಸಂಘದಿಂದ ಕುಣಿತ ಭಜನೆ ನಡೆಯಿತು.

ಧಾರ್ಮಿಕ ಸಭೆ: ಭಜನಾ ಮಂಗಲೋತ್ಸವದ ಬಳಿಕ ಧಾರ್ಮಿಕ ಸಭೆ ನಡೆಯಿತು.

ಭಗವಂತನನ್ನು ಒಲಿಸಲು ಭಜನೆಯೇ ಸಾರ್ವಕಾಲಿಕ ಸೂತ್ರ-ಮಹೇಶ್ ಕಜೆ
ಧಾರ್ಮಿಕ ಭಾಷಣ ಮಾಡಿದ ವಕೀಲ ಮಹೇಶ್ ಕಜೆಯವರು ಮಾತನಾಡಿ ಭಕ್ತಿ, ನಂಬಿಕೆ, ಶ್ರದ್ಧೆ, ಭಾವಶುದ್ಧಿಯಿಂದ ಕೂಡಿದ ಭಜನೆಯಿಂದ ಭಗವಂತನನ್ನು ಒಲಿಸಲು ಸಾಧ್ಯವಿದೆ. ಹಾಗಾಗಿ ಭಗವಂತನ್ನು ಒಲಿಸಲು ಭಜನಯೇ ಸಾರ್ವಕಾಲಿಕ ಸೂತ್ರವಾಗಿದೆ, ಆ ನಿಟ್ಟಿನಲ್ಲಿ ತುಡರ್ ಯುವಕ ಸಂಘವು ಭಜನಾ ಸಂಘದ ಕಟ್ಟಿ ಯುವ ಸಮಾಜಕ್ಕೆ ಭಜನೆಯ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ ಇಂತಹ ಕೆಲಸಕ್ಕೆ ಭಗವಂತನ ಅನುಗ್ರಹ ಸದಾ ಇರುತ್ತದೆ ಎಂದು ಹೇಳಿದರು.

ಭಜನಾ ಸಂಘದಿಂದ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಉದ್ದಿಪನ-ನನ್ಯ
ಶುಭಾಶಂಸನೆಗೈದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಶಿಸ್ತು ಮತ್ತು ಶ್ರದ್ಧೆಯಿಂದ ಭಜನಾ ಸಂಘವನ್ನು ಯಾವ ರೀತಿ ಕಟ್ಟಬಹುದು ಎಂಬುದನ್ನು ತುಡರ್‌ನಿಂದ ಕಲಿಯಬೇಕಾಗಿದೆ, ತುಡರ್ ಯುವಕ ಮಂಡಲದಲ್ಲಿ ಭಜನಾ ಸಂಘದ ಹುಟ್ಟಿನಿಂದಾಗಿ ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯ ಜತೆಗೆ ಸಾಮಾಜಿಕ ಪರಿವರ್ತನೆಯೂ ಆಗಿದೆ, ವರ್ಷದಿಂದ ವರ್ಷಕ್ಕೆ ತುಡರ್ ಭಜನಾ ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ಪ್ರತಿ ವರ್ಷ ವಿಜೃಂಭಣೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಮನೆ-ಮನಗಳಲ್ಲಿ ತುಡರ್ ಬೆಳಗಲಿ-ಶೇಷಪ್ಪ ಗೌಡ ನೀರ್ಖಜೆ
ಸನ್ಮಾನ ಸ್ವೀಕರಿಸಿದ ಶೇಷಪ್ಪ ಗೌಡರವರು ಮಾತನಾಡಿ ನನ್ನ ಧಾರ್ಮಿಕ ಸೇವೆಯನ್ನು ಗುರುತಿಸಿ ಗೌರವಿಸಿದ ತುಡರ್ ಸಂಘಕ್ಕೆ ಕೃತಜ್ಞನಾಗಿದ್ದೇನೆ, ಸದಾ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ತುಡರ್ ಯುವಕ ಮಂಡಲವು ಗ್ರಾಮದ ಪ್ರತಿ ಮನೆ-ಮನಗಳಲ್ಲಿ ಬೆಳಗಲಿ ಎಂದು ಹೇಳಿದರು.

ಕಾವು ಅಮ್ಚಿನಡ್ಕ ವಿನಾಯಕ ಮಂದಿರದ ಸಂಚಾಲಕರಾಗಿರುವ ಶೇಷಪ್ಪ ಗೌಡ ನೀರ್ಖಜೆಯವರಿಗೆ ತುಡರ್ ಭಜನಾ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ನನ್ಯ ಅಚ್ಚುತ ಮೂಡೆತ್ತಾಯರವರು ಸನ್ಮಾನಿತರಿಗೆ ಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ, ಫಲಪುಷ್ಫ ಕಾಣಿಕೆ, ಸನ್ಮಾನ ಪತ್ರ ನೀಡಿ ಅಭಿನಂದಿಸಿದರು. ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ಸನ್ಮಾನಪತ್ರ ವಾಚಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ತುಡರ್ ಯುವಕ ಮಂಡಲದ ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆಯವರು ವಂದಿಸಿದರು.
ವೇದಿಕೆಯಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ಉಪಸ್ಥಿತರಿದ್ದರು.

ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರು ಪ್ರಾರ್ಥಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಪದಾಧಿಕಾರಿಗಳಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಲಿಂಗಪ್ಪ ನಾಯ್ಕ ನನ್ಯ, ಪುರುಷೋತ್ತಮ ಆಚಾರ್ಯ ನನ್ಯ, ಶ್ರೀಕುಮಾರ್ ಬಲ್ಯಾಯ, ನಿರಂಜನ ಕಮಲಡ್ಕ ಕೆರೆಮೂಲೆರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಸದಸ್ಯರುಗಳು ಸಹಕರಿಸಿದರು. ಧಾರ್ಮಿಕ ಸಭೆಯ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here