ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ – ಕಡಬ ಸರಸ್ವತಿ ವಿದ್ಯಾಲಯದ ನಿಶ್ವಿತ್ ಗೆ ಚಿನ್ನದ ಪದಕ

0

ಕಡಬ: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ, ಮಧ್ಯ ಪ್ರದೇಶದ ದೇವಾಸ್ ನಲ್ಲಿ ನಡೆಸಿದ 17 ರ ವಯೋಮಿತಿಯ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ನಮ್ಮ ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ನಿಶ್ವಿತ್ ಪಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ವನ್ನು ಪಡೆದು ದೆಹಲಿಯಲ್ಲಿ ನಡೆಯುವ ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾನೆ. ಇವನು ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಪೊನ್ನೈತ್ತೂರು ಸುರೇಶ ಮತ್ತು ಚಂದ್ರಾವತಿ ದಂಪತಿಗಳ ಪುತ್ರ. ಇವರಿಗೆ ಸಂಸ್ಥೆಯ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ಇವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here