ಪುತ್ತೂರು: ಕಡಬ ನೆಕ್ಕಿಲದ ಸಂದೀಪ್ ಎಂಬ ಯುವಕನೊಬ್ಬನ ವಿರುದ್ದ ಫೋಕ್ಸೋ ದಾಖಲಾದ ಘಟನೆ ವರದಿಯಾಗಿದೆ. ಯುವತಿಯೊಬ್ಬಳ ಜತೆ ಅಕ್ರಮ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾದಾಗ ಆತನೆ ಅವಳನ್ನು ಮದುವೆಯಾಗಿದ್ದ.
ತುಂಬು ಗರ್ಭಿಣಿಯನ್ನು ಹೆರಿಗೆಗೆಂದು ಕಡಬ ಅಸ್ಪತ್ರೆಗೆ ದಾಖಲಾಗಿಸಲಾಗಿದೆ. ಈ ವೇಳೆ ಆಕೆ ಅಪ್ರಾಪ್ತೆಯಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅನ್ವಯ ಸಂದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ.