ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವದ ದೈವಸ್ಥಾನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪೂರ್ವಭಾವಿ ಸಭೆ

0

ಬಡಗನ್ನೂರುಃ ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಪೂರ್ವಭಾವಿ ಸಭೆಯು ನ. 12ರಂದು ನಡೆಯಿತು.

ಸಭೆಯಲ್ಲಿ ದೈವದ ಕೋಡಿಯಾಡಿ ಕಟ್ಟೆ (ಸಿಂಗಧನ),  ಧ್ವಜಸ್ತಂಭ, ದೈವಗಳು ದೇವರ ಭೇಟಿ ವಿಚಾರದಲ್ಲಿ ಪ್ರಶ್ನೆ ಚಿಂತನೆ ನಡೆಸುವುದು. ಆವರಣ ಗೋಡೆ ದುರಸ್ತಿ ಪಡಿಸುವುದು,  ದೈವದ ವಾಹನ ಹುಲಿ, ಕುದುರೆಗಳಿಗೆ ಬಣ್ಣ ಹಚ್ಚುವುದು, ಪಾಪೆಬಂಡಿ, ಬಂಡಿಕೊಟ್ಯ ಮತ್ತು ಪಾಕಶಾಲೆ ರಚನೆಗೆ ಅನುದಾನ ಒದಗಿಸಲು ಶಾಸಕರಿಗೆ ಮನವಿ ಸಲ್ಲಿಸುವ ವಿಚಾರದಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ರವಿರಾಜ ರೈ ಸಜಂಕಾಡಿ, ಸಮಿತಿ ಸದಸ್ಯರಾದ ಶಶಿಧರ ರೈ ಕುತ್ಯಾಳ, ಶ್ರೀಧರ ನಾಯ್ಕ ನೆರ್ಲಪ್ಪಾಡಿ, ಪುರಂದರ ರೈ ಕುದ್ದಾಡಿ, ಉದಯ ಕುಮಾರ್ ರಾವ್ ಶರವು, ಉದಯ ಕುಮಾರ್ ಪಡುಮಲೆ, ಗುರುಪ್ರಸಾದ್ ರೈ ಕುದ್ದಾಡಿ, ಜನಾರ್ದನ ಪದಡ್ಕ, ಪದ್ಮನಾಭ ರಯ ಅರೆಪ್ಪಾಡಿ, ರೋಹಿತ್ ಕುಮಾರ್ ಮುಡಿಪಿನಡ್ಕ, ರತ್ನಾಕರ ರೈ ಕುದ್ದಾಡಿ, ಹರೀಶ್ ಪೂಜಾರಿ ಮೈಂದನಡ್ಕ ರಾಜೇಶ್ ರೈ ಮೈಂದನಡ್ಕ, ಮಹಾಲಿಂಗ ಪಾಟಾಳಿ ಕುದ್ದಾಡಿ, ವಸಂತ ಮೈಂದನಡ್ಕ, ಶಿವಚಂದ್ರ  ಕುಲಾಲ್ ಪೈರುಪುಣಿ, ಸತೀಶ್ ಗೌಡ ಉಳಿಗ, ಗಣೇಶ ಕುಲಾಲ್ ಪೈರುಪುಣಿ, ರಮೇಶ್ ಪದಡ್ಕ ಮತ್ತು ದೈವ ನರ್ತಕ ಡಾ. ರವೀಶ್ ಪಡುಮಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here