ಮುಂಡಾಲ ಬಜದಗುತ್ತು ಶೀನಪ್ಪ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಕೆದಂಬಾಡಿ ಗ್ರಾಮದ ಮುಂಡಾಲ ಬಜದಗುತ್ತು ಶೀನಪ್ಪ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಅರ್ಪಣೆ ಹಾಗೂ ಉತ್ತರಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಅ.11 ರಂದು ಪರ್ಪುಂಜ ಕೊಲತ್ತಡ್ಕ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯಿತು.

ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಕೋಶಾಧಿಕಾರಿ ಮುಂಡಾಲಗುತ್ತು ಮೋಹನ ಆಳ್ವರವರು ನುಡಿನಮನ ಸಲ್ಲಿಸುತ್ತಾ, ಶೀನಪ್ಪ ಶೆಟ್ಟಿಯವರು ಆದರ್ಶ ಕೃಷಿಕರಾಗಿದ್ದು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು. ವಿಶೇಷ ವ್ಯಕ್ವಿತ್ವವುಳ್ಳ ಎಲ್ಲರನ್ನೂ ಪ್ರೀತಿ ವಾತ್ಸಲ್ಯದಿಂದ ಕಾಣುತ್ತಿದ್ದ ಹೃದಯಶ್ರೀಮಂತಿಕೆಯ ಗುಣ ಹೊಂದಿದ ಮುಂಡಾಳಗುತ್ತು ಮನೆತನದ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು ಎಂದು ಹೇಳಿ ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಶೀನಪ್ಪ ಶೆಟ್ಟಿಯವರ ಪತ್ನಿ ಮುಂಡಾಲಗುತ್ತು ವಸಂತಿ ಎಸ್.ಶೆಟ್ಟಿ, ಪುತ್ರಿ ತೃಪ್ತಿ ರತನ್ ರೈ, ಅಳಿಯ ರತನ್ ರೈ ಕುಂಬ್ರ, ಸಹೋದರಿಯರಾದ ಮೀನಾಕ್ಷಿ ಶೆಟ್ಟಿ, ಉಮಾವತಿ ಶೆಟ್ಟಿ, ಶಶಿಕಲಾ ಶೆಟ್ಟಿ, ಸಹೋದರರಾದ ಜಯರಾಮ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಸುಧೀರ್ ಶೆಟ್ಟಿ,ಬಾವಂದಿರಾದ ದೇರಣ್ಣ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಸತೀಶ್ ಶೆಟ್ಟಿ ಅಲ್ಲದೆ ಗಣ್ಯರಾದ ದಯಾನಂದ ಶೆಟ್ಟಿ ಉಜಿರುಮಾರು, ಹೇಮನಾಥ ಶೆಟ್ಟಿ ಕಾವು, ಸಾಜ ರಾಧಾಕೃಷ್ಣ ಆಳ್ವ, ತಿಮ್ಮಪ್ಪ ಶೆಟ್ಟಿ ಚನಿಲ, ಪುರುಷೋತ್ತಮ ಬೂಡಿಯಾರ್, ರಾಧಾಕೃಷ್ಣ ರೈ ಬೂಡಿಯಾರ್, ರಾಜೇಶ್ ರೈ ಪರ್ಪುಂಜ, ಪ್ರಕಾಶ್ಚಂದ್ರ ರೈ ಕೈಕಾರ, ನಿವೃತ್ತ ಡಿವೈಎಸ್‌ಪಿ ಶಾಂತರಾಮ ರೈ, ಡಿವೈಎಸ್‌ಪಿ ದಿನಕರ ಶೆಟ್ಟಿ, ವಿಜಯ ಕುಮಾರ್ ರೈ ಕೋರಂಗ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಸುಭಾಷ್ ರೈ ಕಡಮಜಲು, ರಾಘವ ಗೌಡ ಕೆರೆಮೂಲೆ, ಶಿವರಾಮ ಗೌಡ ಇದ್ಯಪೆ, ಪುರಂದರ ರೈ ಮಿತ್ರಂಪಾಡಿ, ಜಯರಾಮ ರೈ ಮಿತ್ರಂಪಾಡಿ, ಮೋನಪ್ಪ ಪೂಜಾರಿ ಬಡಕ್ಕೋಡಿ,ರಾಮಯ್ಯ ರೈ ತಿಂಗಳಾಡಿ, ಸುಧಾಕರ ರೈ ಕುಂಬ್ರ ಸೇರಿದಂತೆ ಶೀನಪ್ಪ ಶೆಟ್ಟಿಯವರ ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇಲಾಖಾ ಅಧಿಕಾರಿ ವೃಂದದವರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here