





ಪುತ್ತೂರು: ಅ.30ರಂದು ನಿಧನ ಹೊಂದಿದ ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪಾಲುದಾರರಾಗಿದ್ದ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಪ್ರಶಾಂತ್ ಪಿ.ಆರ್‌ರವರಿಗೆ ನ.12ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನಡೆದ ಉತ್ತರಕ್ರಿಯಾಧಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಕುಟುಂಬಸ್ಥರ ಪರವಾಗಿ ಪ್ರಶಾಂತ್‌ರವರ ಮಾವ ಗೋಪಾಲ್, ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲ್ ನುಡನಮನ ಸಲ್ಲಿಸದರು. ಹಿತೈಷಿಗಳ ನೆಲೆಯಲ್ಲಿ ಕಹಳೆ ನ್ಯೂಸ್‌ನ ಶ್ಯಾಮ ಸುದರ್ಶನ್‌ರವರು ನುಡಿ ನಮನ ಸಲ್ಲಿಸಿದರು.




ಈ ಸಂದರ್ಭದಲ್ಲಿ ಪ್ರಶಾಂತ್‌ರವರ ತಂದೆ ರಮೇಶ್ ಪೂಜಾರಿ, ತಾಯಿ ರತ್ನ, ಪತ್ನಿ ಅಶ್ರಿತಾ, ಅಕ್ಕಂದಿರಾದ ಚೈತ್ರಾ, ನೀತಾ, ಬಾವಂದಿರಾದ ಅನಿಲ್, ಸುರೇಶ್ ಬತ್ತನಾಡಿ ಅಲ್ಲದೆ ಕುಟುಂಬಸ್ಥರು, ರಾಜಕೀಯ ಗಣ್ಯರು, ಸಾಮಾಜಿಕ ಕಾರ್ಯಕರ್ತರು, ಸೌತ್ ಕೆನರಾ ಎಲ್‌ಇಡಿ ಅಸೋಸಿಯೇಶನ್‌ನವರು, ಫೋಟೋಗ್ರಾಫರ್ ಅಸೋಸಿಯೇಶನ್‌ನವರು, ಧ್ವನಿ ಮತ್ತು ಬೆಳಕು ಅಸೋಸಿಯೇಶನ್‌ನವರು ಅಲ್ಲದೆ ಪಿಕ್ಸೆಲ್ ಕ್ರಿಯೇಟಿವ್ಸ್‌ನ ಪಾಲುದಾರ ಪ್ರಜ್ವಲ್ ಮತ್ತು ಸಿಬ್ಬಂದಿ ವರ್ಗದವರು ಅಲ್ಲದೆ ನೂರಾರು ಹಿತೈಷಿಗಳು, ಊರ ಪರವೂರ ನೂರಾರು ಗಣ್ಯರು, ಸಾರ್ವಜನಿಕರು ಭಾಗವಹಿಸಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಪ್ರಶಾಂತ್ ಪಲ್ಲತ್ತಡ್ಕರವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.














