ಕೊಡಿಮಾರು ಅಬೀರದಲ್ಲಿ ದೀಪಾವಳಿ ಕ್ರೀಡಾ ಕೂಟ

0

ಕಾಣಿಯೂರು: ಹಿಂದೂ ಧರ್ಮದ ಪ್ರತಿಯೊಂದು ಹಬ್ಬಗಳಿಗೂ ತನ್ನದೇ ಆದ ಮಹತ್ವವಿದ್ದು ಅದರಲ್ಲಿ ದೀಪಾವಳಿ ಹಬ್ಬ ಅಂಧಕಾರದಿಂದ ಸುಜ್ಞಾನದ ಕಡೆಗೆ ನಮ್ಮ ಬದುಕನ್ನು ಸಾಗಿಸುವ ಹಬ್ಬ, ಬೆಳಕಿನ ಹಬ್ಬ ದೀಪಾವಳಿಯನ್ನು ಊರಿನ ಜನರೆಲ್ಲಾ ಒಟ್ಟಾಗಿ ಸೇರಿ ಸಾಮೂಹಿಕವಾಗಿ ಕ್ರೀಡಾಕೂಟ ನಡೆಸುವುದರ ಮೂಲಕ ಒಂದಾಗಿ ಆಚರಣೆ ಮಾಡುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಶ್ಲಾಘನೀಯ ಎಂದು ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯಾವಾದಿ ಮಹೇಶ್ ಕೆ ಸವಣೂರು ಹೇಳಿದರು. ಅವರು ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ವತಿಯಿಂದ ಕೊಡಿಮಾರಿನಲ್ಲಿ ನಡೆದ 14ನೇ ವರ್ಷದ ದೀಪಾವಳಿ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಅಶ್ಲೇಷ್ ಮಿಪಾಲು ವಹಿಸಿದ್ದರು. ವೇದಿಕೆಯಲ್ಲಿ ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ, ಗೆಳೆಯರ ಬಳಗದ ಗೌರವಾಧ್ಯಕ್ಷರಾದ ರಂಜಿತ್ ಹೊಸೊಕ್ಲು ಉಪಸ್ಥಿತರಿದ್ದರು. ಜಯಂತ ಅಬೀರ ಸ್ವಾಗತಿಸಿ ಗೆಳೆಯರ ಬಳಗದ ಗೌರವ ಸಲಹೆಗಾರರಾದ ಶೇಷಪ್ಪ ಅಬೀರ ವಂದಿಸಿದರು. ಗೆಳೆಯರ ಬಳಗದ ಗೌರವ ಸಲಹೆಗಾರಾರದ ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ರುಕ್ಮಯ್ಯ ಗೌಡ ಅಜಿರಂಗಳ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ ಅಧ್ಯಕ್ಷ ಉದಯ ರೈ ಮಾದೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಸವಣೂರು ವಲಯದ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಕಳುವಾಜೆ , ಗೆಳೆಯರ ಬಳಗದ ಅಧ್ಯಕ್ಷ ಅಶ್ಲೇಷ್ ಮಿಪಾಲು, ಗೌರವಾಧ್ಯಕ್ಷ ರಂಜಿತ್ ಹೊಸೊಕ್ಲು, ಕಾರ್ಯದರ್ಶಿ ಪ್ರೀತಮ್ ಕಂಡೂರು ಉಪಸ್ಥಿತರಿದ್ದರು. ಕ್ರೀಡಾ ಕೂಟದ ಉದ್ಘಾಟನೆಯ ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here