ಪುತ್ತೂರು: ಇಲ್ಲಿನ ಕೋರ್ಟು ರಸ್ತೆಯಲ್ಲಿ ಕಳೆದ 24 ವರ್ಷಗಳಿಂದ ವ್ಯವಹರಿಸುತ್ತಿರುವ ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ 25ನೇ ವರ್ಷಕ್ಕೆ ಪಾದಾರ್ಪಣೆ ಮತ್ತು ದೀಪಾವಳಿ ಪ್ರಯುಕ್ತ ನ. 13ರಂದು ಶ್ರೀ ಲಕ್ಷ್ಮೀ ಪೂಜೆ ನಡೆಯಿತು. ಕಳೆದ ಹಲವು ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ವಿಜಿತ್ ಜ್ಯುವೆಲ್ಲರ್ಸ್ ಪ್ರಸ್ತುತ ವಿಸ್ತೃತ ಮಳಿಗೆಯಾಗಿ ವ್ಯವಹರಿಸುತ್ತಿದ್ದು ತನ್ನದೇ ಆದ ಗ್ರಾಹಕ ಬಳಗ ಹೊಂದಿದೆ. ವಿಜಿತ್ ಜ್ಯುವೆಲ್ಲರ್ಸ್ ನಿಂದ ಚಿನ್ನಾಭರಣ ಖರೀದಿಸುವುದೆಂದರೆ ಅದೃಷ್ಟ ಎಂಬ ಭಾವನೆ ಗ್ರಾಹಕರಲ್ಲಿ ಮೂಡಿರುವುದು ಇಲ್ಲಿನ ವಿಶೇಷತೆಯಾಗಿದೆ. ಅದರಲ್ಲೂ ಲಕ್ಷ್ಮೀಪೂಜೆಯ ದಿನ ಗ್ರಾಹಕರು ಚಿನ್ನಾಭರಣ ಖರೀದಿಗೆ ಆಗಮಿಸುವುದು ಇಲ್ಲಿನ ಇನ್ನೊಂದು ವಿಶೇಷತೆಯಾಗಿದೆ.
ಬೆಳಿಗ್ಗೆ ಶ್ರೀ ಲಕ್ಷ್ಮಿಪೂಜೆ ನಡೆಯಿತು. ವಿಶ್ವೇಶ್ವರ ಪುರೋಹಿತರು ಪೂಜಾ ಕಾರ್ಯಕ್ರಮ ನಡೆಸಿದರು. ಬಳಿಕ ಜ್ಯುವೆಲ್ಲರ್ ಶೋರೂಂ ಗ್ರಾಹಕರಿಂದ ತುಂಬಿ ತುಳುಕಿದ್ದ ದೃಶ್ಯ ಕಂಡುಬಂತು. ಸಾಮಾನ್ಯವಾಗಿ ವಿಜಿತ್ ಜ್ಯುವೆಲ್ಲರ್ಸ್ ಸದಾ ಗ್ರಾಹಕರಿಂದ ತುಂಬಿರುವುದಾದರೂ ದೀಪಾವಳಿ ಪ್ರಯುಕ್ತ ಗ್ರಾಹಕರ ಸಂಖ್ಯೆ ಇನ್ನೂ ಹೆಚ್ಚಾಗಿತ್ತು.
ಮುಳಿಯ ಜ್ಯುವೆಲ್ಲರ್ಸ್ನ ಮುಳಿಯ ಕೇಶವ ಪ್ರಸಾದ್, ಮುಳಿಯ ಕಾವೇರಮ್ಮ, ಕೃಷ್ಣ ಪ್ಲೈವುಡ್ ನ ಭಾಮಿ ಜಗದೀಶ್ ಶೆಣೈ, ಡಿಸೈನರ್ ಯಶವಂತ್, ಸಾಂತಪ್ಪ ಪೂಜಾರಿ ಕಡೇಶ್ವಾಲ್ಯ, ಕೋರ್ಟು ರಸ್ತೆಯ ವಿವಿಧ ಜ್ಯುವೆಲ್ಲರಿ ಮಳಿಗೆಗಳ ಮಾಲಕರು, ಸಿಬಂದಿಗಳು ಶುಭ ಹಾರೈಸಿದರು. ಮ್ಹಾಲಕರಾದ ಎ. ಅಚ್ಚುತ ಆಚಾರ್ಯ ಅತಿಥಿ ಗಣ್ಯರು, ಗ್ರಾಹಕರನ್ನು ಬರಮಾಡಿಕೊಂಡರು. ಲತಾ ಅಚ್ಚುತ ಆಚಾರ್ಯ, ವಿಜಿತ್ ಆಚಾರ್ಯ, ವಿದ್ಯಾ ಆಚಾರ್ಯ, ಸುಧೀರ್ ವಿದ್ಯಾ ಆಚಾರ್ಯ, ಅನಿಕಾ ಆಚಾರ್ಯ ನಿರಂಜನ್ ಆಚಾರ್ಯ, ವಿನಯ ನಿರಂಜನ್ ಆಚಾರ್ಯ, ಶೌರ್ಯ ಆಚಾರ್ಯ, ಗ್ರಾಹಕರು ಮತ್ತು ಹಿತೈಷಿ ಬಂಧು ಮಿತ್ರರನ್ನು ಸತ್ಕರಿಸಿದರು. ಸಿಬ್ಬಂದಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.