ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲ ಅವರಿಗೆ ಸನ್ಮಾನ

0

ಪುತ್ತೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈಯ್ದು ಜನಮನ್ನಣೆಯೊಂದಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರದೊಂದಿಗೆ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದು, ಇದೀಗ ದ.ಕ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಮಾಜರತ್ನ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರನ್ನು ನ.17ರಂದು ಬೆಂಗಳೂರು-ಮಂಗಳೂರು ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಪದಾಧಿಕಾರಿಗಳು ರವೀಂದ್ರ ಶೆಟ್ಟಿ ಯವರ ನಿವಾಸವಾದ ಮುಕ್ರಂಪಾಡಿ ಇಲ್ಲಿ ಸನ್ಮಾನಿಸಿದರು.
ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮುಖ್ಯಸ್ಥ ಸೋಮಶೇಖರ್ ರವರು ಮಾತನಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿಯವರ ಸಮಾಜ ಸೇವೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಶಸ್ತಿಗಳು ರವೀಂದ್ರ ಶೆಟ್ಟಿಯವರನ್ನು ಅರಸಿಕೊಂಡು ಬರಲಿ ಎಂದು ಹೇಳಿ ಶುಭ ಹಾರೈಸಿದರು. ಬೆಂಗಳೂರಿನ ಟಾಟಾ ಆರೋಗ್ಯ ಜನರಲ್ ಇನ್ಸೂರೆನ್ಸ್ ಸೂಪರ್ ಅಸೋಸಿಯೇಟ್ಸ್ ಹರ್ಷ ಎಂ.ಆರ್ ಹಾಗೂ ಕಂಪೆನಿಯ ಸಲಹೆಗಾರ ರಾಜುಸೂರ್ಯರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here