ಪುತ್ತೂರು: ಅಂಕತ್ತಡ್ಕ ಶ್ರೀ ಬ್ರಹ್ಮಬೈದೇರುಗಳ ನೇತ್ರಾವತಿ ಗರಡಿ ಪೂಂಜಿರೋಟು ಇದರ ಬ್ರಹ್ಮಕಲಶೋತ್ಸವವು ಜ.24ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಗರಡಿಯ ಆವರಣದಲ್ಲಿ ನ.16ರಂದು ಭಕ್ತಾದಿಗಳ ಸಭೆ ನಡೆಯಿತು. ಸಭೆಯಲ್ಲಿ ಗರಡಿಯಲ್ಲಿ ನಡೆಯಲಿರುವ ಜೀರ್ಣೋದ್ದಾರ ಕಾರ್ಯ ಮತ್ತು ಬ್ರಹ್ಮಕಲಶೋತ್ಸವದ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಕೆಯ್ಯೂರು ಶ್ರೀಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಶಿಧರ ರಾವ್ ಬೊಳಿಕಳ, ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಪದ್ಮನಾಭ ಭಂಡಾರಿ ಪೂರ್ವಭಾವಿ ಸಿದ್ದತೆಯ ಕುರಿತು ಮಾತನಾಡಿದರು.
ಸಭೆಯಲ್ಲಿ ಕಂಪ ರಾಮಣ್ಣ ಪೂಜಾರಿ, ಶ್ರೀಧರ ಭಂಡಾರಿ ಮಾಡಾವು, ಶೇಖರ ಭಂಡಾರಿ, ಸುಬ್ರಾಯಗೌಡ, ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಲೋಕನಾಥ ಭಂಡಾರಿ, ಪ್ರವೀಣ್ ಭಂಡಾರಿ, ತಾರಾನಾಥ ಕಂಪ, ಸಂತೋಷ್ ರೈ ಅಂಕತ್ತಡ್ಕ, ಮೋಹನ ಗೌಡ ಬೊಳಿಕಲ ಸುಳ್ಯ, ನಾಗರಾಜ ಶೆಟ್ಟಿ, ಸೀತಾರಾಮ ರೈ, ಪ್ರಸಾದ್ ರೈ, ಸುಚೀಂದ್ರ, ಶಿವರಾಮ ರೈ ಮಾಡಾವು ಕಜೆ, ದಿನೇಶ್ ರೈ, ಸಂಜೀವ ಪೂಜಾರಿ ,ಕಿಟ್ಟಣ್ಣ ರೈ ಕೋರಿಕ್ಕಾರು, ರಮೇಶ್ ಗೌಡ ಅಂಕತ್ತಡ್ಕ , ಪ್ರವೀಣ್ ಚೆನ್ನಾವರ, ಬಾಲಕೃಷ್ಣ ಗೌಡ, ಗೋಪಾಲಕೃಷ್ಣ, ನವೀನ್, ಕುಶಾಲಪ್ಪ ಗೌಡ, ಗುರುವ, ರುಕ್ಮಯ್ಯ ಶೆಟ್ಟಿ, ಯಶವಂತ ಬೊಳಿಕಳ ಸುಳ್ಯ, ದೀಕ್ಷಿತ್ ಜೈನ್ ಚೆನ್ನಾವರ, ಮೋನಪ್ಪಗೌಡ ಪಟ್ಲ ಚೆನ್ನಾವರ, ವೀಣಾ ಪದ್ಮನಾಭ ಭಂಡಾರಿ, ಗೀತಾ ವಿಜಯ ಭಂಡಾರಿ, ದುರ್ಗಾ ಚಂದ್ರಶೇಖರ ಭಂಡಾರಿ, ಸರಸ್ವತಿ ಕುಶಾಲಪ್ಪ ಪೂಜಾರಿ, ಕೋಟಿ ಪೂಜಾರಿ ಶೇಣಿ, ತಿಮ್ಮಪ್ಪ ಪೂಜಾರಿ ಬೊಳಿಯಾಲ, ಶೇಷಪ್ಪ ಕಜೆಮಾರ್, ಬಿ.ಪಿ.ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.