ನಾಳೆಯಿಂದ ನ.30ರ ವರೆಗೆ ಒಡಿಯೂರು ಶ್ರೀಗಳವರು ಪುಣೆ, ಮುಂಬೈ ಪ್ರವಾಸ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನ. 26ರಿಂದ ನ. 30ರ ತನಕ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು  ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಪುಣೆ ಘಟಕವು ಆಯೋಜಿಸಿರುವ ಹಲವು ಕಾರ್ಯಕ್ರಮಗಳಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಆಶೀರ್ವಚನಗೈಯಲ್ಲಿದ್ದಾರೆ.
ನ.೨೬ರಂದು ಸಂಜೆ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಪುಣೆ ಮಹಾನಗರದ ಬಂಟರ ಭವನದಲ್ಲಿ ಬಳಗದ ವಾರ್ಷಿಕೋತ್ಸವ-ಗುರುವಂದನಾ ಕಾರ್ಯಕ್ರಮ ನಡೆಯಲಿರುವುದು. ಆದುದರಿಂದ ಸದ್ರಿ ದಿನಗಳಲ್ಲಿ ಸಾರ್ವಜನಿಕ ಭೇಟಿಗೆ ಶ್ರೀ ಗಳು ಲಭ್ಯರಿರುವುದಿಲ್ಲ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here