ನಾಳೆ(ನ.26)ವಿಟ್ಲ ಜೇಸಿಐ ಶಾಲಾ ವಾರ್ಷಿಕೋತ್ಸವ

0

ವಿಟ್ಲ: ವಿಟ್ಲದ ಬಸವನಗುಡಿಯ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ನ.26ರಂದು ಜರುಗಲಿದೆ. ಮಧ್ಯಾಹ್ನ ಜೇಸಿಐ ವಿದ್ಯಾರ್ಥಿಗಳಿಂದ ಪೆರ್ಲ ಶಿವರಾಮ ಶೆಟ್ಟಿ ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.


ಬಳಿಕ ವಿದ್ಯಾರ್ಥಿ ನಾಯಕಿ ಸೃಜನಾ ಎಸ್.ರೈ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾಠ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾ ರ್ಥಿನಿ ಶ್ರುತಿ ಕೆ., ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ನಿವೇದ್ಯಾ ಗಣೇಶ್ ಭಾಗವಹಿಸುವರು. ಬಳಿಕ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here