ಎಸ್.ಕೆ.ಜೆ.ಎಂ ಕುಂಬ್ರ ರೇಂಜ್ ಮುಸಾಬಖ, 20ನೇ ವಾರ್ಷಿಕ ಸಮಾರಂಭ

0

ರೇಂಜ್ ವ್ಯಾಪ್ತಿಯಲ್ಲಿ 10 ವರ್ಷ ಸೇವೆಗೈದ ಮುಅಲ್ಲಿಮರಿಗೆ ಸನ್ಮಾನ

ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕುಂಬ್ರ ರೇಂಜ್ ಹಾಗೂ ಮದ್ರಸ ಮೆನೇಜ್‌ಮೆಂಟ್ ವತಿಯಿಂದ ನಡೆಸಲ್ಪಡುವ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಮತ್ತು ಕುಂಬ್ರ ರೇಂಜ್‌ನ ೨೦ನೇ ವಾರ್ಷಿಕ ಸಮಾರಂಭ ಓಲೆಮುಂಡೋವು ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಓಲೆಮುಂಡೋವು ಖತೀಬ್ ಅಸ್ಸಯ್ಯಿದ್ ಅಲವಿ ತಂಙಳ್ ನೇತೃತ್ವದಲ್ಲಿ ಮಖಾಮ್ ಝಿಯಾರತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಬ್ದುಲ್ ಖಾದರ್ ಹಾಜಿ ಬಲ್ಕಾಡ್ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಕೂಡುರಸ್ತೆ ಅಧ್ಯಕ್ಷತೆ ವಹಿಸಿದ್ದರು.

ರೇಂಜ್ ಮಟ್ಟದ 21 ಮದ್ರಸಗಳ ಕಲಾ ಸ್ಪರ್ಧೆಯಲ್ಲಿ ಮಾಡಾವು ನುಸ್ರತ್ತುಲ್ ಇಸ್ಲಾಂ ಮದ್ರಸ ಮತ್ತು ಕಟ್ಟತ್ತಾರ್ ನುಸ್ರತ್ತುಲ್ ಇಸ್ಲಾಂ ಮದ್ರಸ ಜಂಟಿಯಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಹಿದಾಯತುಲ್ ಇಸ್ಲಾಂ ಶೇಖಮಲೆ ದ್ವಿತೀಯ ಸ್ಥಾನ ಮತ್ತು ಅಲ್-ಖೌಲ ತ್ಯಾಗರಾಜೆ ತೃತೀಯ ಸ್ಥಾನ ಪಡೆದುಕೊಂಡಿತು.

ಸನ್ಮಾನ ಕಾರ್ಯಕ್ರಮ:
ಕುಂಬ್ರ ರೇಂಜ್ ವ್ಯಾಪ್ತಿಯಲ್ಲಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದ ಉಸ್ತಾದರುಗಳನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಗೌರವ ಧನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಓಲೆಮುಂಡೋವು ಜಮಾಅತ್ ಸಮಿತಿ ಸ್ಥಳ ಸೌಕರ್ಯ ಮತ್ತು ಊಟದ ವ್ಯವಸ್ಥೆ ನೀಡಿ ಸಹಕರಿಸಿದರೆ, ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನವನ್ನು ಮರ್‌ಹೂಂ ಅಬ್ಬಾಸ್ ಹಾಜಿ ಮತ್ತು ಮಕ್ಕಳು ಪರ್ಪುಂಜ ಹಾಗೂ ದ್ವಿತೀಯ ಬಹುಮಾನವನ್ನು ಅಬ್ಬಾಸ್ ಪಾಲ್ತಾಡ್ ನೀಡಿ ಸಹಕರಿಸಿದರು. ರೇಂಜ್ ವ್ಯಾಪ್ತಿಯ ಜಮಾಅತರು, ದಾನಿಗಳು, ಸ್ಥಳೀಯ ಎಸ್ಕೆಎಸ್ಸೆಸ್ಸೆಫ್ ಶಾಖೆಯವರು ಸಹಕರಿಸಿದರು.

ರೇಂಜ್ ಅಧ್ಯಕ್ಷ ಹಸನ್ ಬಾಖವಿ, ಕೋಶಾಧಿಕಾರಿ ಅಬ್ದುಲ್ ಶುಕೂರ್ ದಾರಿಮಿ, ರಿಲೀಫ್ ಚೇರ್‌ಮೆನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್.ಕೆ.ಜೆ.ಎಂ ಜಿಲ್ಲಾಧ್ಯಕ್ಷ ಶಂಸುದ್ದೀನ್ ದಾರಿಮಿ, ರೇಂಜ್ ಸಾರಥಿಗಳು, ಮುಅಲ್ಲಿಮರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೇಂಜ್ ಕಾರ್ಯದರ್ಶಿ ಅಬ್ದುಲ್ ನಾಸಿರ್ ಫೈಝಿ ತ್ಯಾಗರಾಜೆ ಸ್ವಾಗತಿಸಿದರು. ಬದ್ರುದ್ದೀನ್ ರಹ್ಮಾನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here