ಪುತ್ತೂರು ಇನ್ನರ್ ವೀಲ್ ಕ್ಲಬ್ ನೇತೃತ್ವದಲ್ಲಿ ‘ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮ’

0

ಪುತ್ತೂರು: ಪುತ್ತೂರು ಇನ್ನರ್ ವೀಲ್ ಕ್ಲಬ್ ಇವರ ನೇತೃತ್ವದಲ್ಲಿ ‘ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮ’ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾ ಸಂಸ್ಥೆಗಳ ತೆಂಕಿಲ ಆವರಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಪುತ್ತೂರು ಅಗ್ನಿಶಾಮಕ ಸಹ ಠಾಣಾಧಿಕಾರಿ ಶಂಕರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು ಅಗ್ನಿಶಾಮಕ ಠಾಣಾ ಪ್ರಮುಖ ಅಧಿಕಾರಿ ರುಕ್ಮಯ ಗೌಡ ಅವರು ಅಗ್ನಿ ಸುರಕ್ಷತೆಯ ವಿವಿಧ ವಿಧಾನಗಳ ಕುರಿತು ಮಾಹಿತಿ ನೀಡಿದರು. ಮೈದಾನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳೆಲ್ಲ ಸೇರಿ ಪ್ರಾತ್ಯಕ್ಷಿಕೆಯನ್ನು ನೀಡಿದರು.


ಇನ್ನರ್ ವೀಲ್ ಅಧ್ಯಕ್ಷೆ ರೂಪ ಲೇಖ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಧ್ಯಾ ಸಾಯ ವಂದಿಸಿದರು. ಶಂಕರಿ ಎಂ ಎಸ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿವೇಕಾನಂದ ವಿದ್ಯಾ ವರ್ಧಕ ಸಂಘದ ತೆಂಕಿಲಾ ಕ್ಯಾಂಪಸ್ ನ ಎಲ್ಲಾ ವಿದ್ಯಾ ಸಂಸ್ಥೆಗಳಾದ ನರೇಂದ್ರ ಪದವಿಪೂರ್ವ ಕಾಲೇಜ್,ವಿವೇಕಾನಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ,ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಂಶುಪಾಲರು,ಮುಖ್ಯಗುರುಗಳು,ಉಪನ್ಯಾಸಕರು,ಶಿಕ್ಷಕರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here