ಡಿ.1: ಕಾಣಿಯೂರಿನಲ್ಲಿ ಅಮ್ಮ ಮೆಡಿಕಲ್ಸ್,ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ

0

ಕಾಣಿಯೂರು: ಅಮ್ಮ ಮೆಡಿಕಲ್ಸ್ ಮತ್ತು ಅಮ್ಮ ಡಿಜಿಟಲ್ ಸೇವಾ ಕೇಂದ್ರ ಕಾಣಿಯೂರಿನ ನವಶಕ್ತಿ ಕಾಂಪ್ಲೆಕ್ಸ್‌ನಲ್ಲಿ ಡಿ.1ರಂದು ಶುಭಾರಂಭಗೊಳ್ಳಲಿದೆ. ದೈವನರ್ತಕರಾದ ಕರುಣಾಕರ ಏನೆಕಲ್ಲು ಅವರು ಸಂಸ್ಥೆಯನ್ನು ಉದ್ಘಾಟಿಸಲಿದ್ದು, ಕಾಣಿಯೂರು ಶ್ರೀದುರ್ಗಾ ನರ್ಸಿಂಗ್ ಹೋಂನ ಡಾ| ಶಶಿಧರ್ ಪೆರುವಾಜೆ, ಕಾಣಿಯೂರು ಕುಮಾರ್ ಕ್ಲಿನಿಕ್‌ನ ಡಾ| ಉದಯ ಕುಮಾರ್, ಸವಣೂರು ಚಿಕಿತ್ಸಾಲಯದ ಡಾ| ಸುಬ್ರಹ್ಮಣ್ಯ ಭಟ್ ಸವಣೂರು, ಕಾಣಿಯೂರು ಅಶ್ವಿನಿ ಕ್ಲಿನಿಕ್‌ನ ಡಾ| ರವಿಶಂಕರ್, ಸವಣೂರು ಕುಮಾರ ಕ್ಲಿನಿಕ್‌ನ ಡಾ| ಶ್ಯಾಮ್ ಸುಂದರ್ ಸವಣೂರು, ಪುತ್ತೂರು ನಿವೃತ್ತ ಪ್ರಧಾನ ಅಂಚೆ ಪಾಲಕರಾದ ಸೀತಾರಾಮ ಗೌಡ ಮುಂಡಾಳ, ಕಾಣಿಯೂರು ನವಶಕ್ತಿ ಕಾಂಪ್ಲೆಕ್ಸ್‌ನ ಮಾಲಕ ಸುಧಾಕರ ಕಂಡೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಚಂದ್ರಶೇಖರ್ ಮುಂಡಾಳ, ಜಗದೀಶ್ ಮುಂಡಾಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here