ಆಲಂಕಾರು ಸಿ.ಎ. ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ.ಕೆ ರವರ ಬೀಳ್ಕೊಡುಗೆ ಕಾರ್ಯಕ್ರಮ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿಗೊಂಡಿರುವ ಪದ್ಮಪ್ಪ ಗೌಡ ಕೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ನ.29ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಸೇವಾ ನಿವೃತ್ತರಾದ ಪದ್ಮಪ್ಪ ಗೌಡ ರವರಿಗೆ ಸನ್ಮಾನಿಸಿ ಮಾತನಾಡಿ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಹಾಗು ಸಿಬ್ಬಂದಿ ವರ್ಗದವರು ಜೂತೆ ಜೂತೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಹಕಾರಿ ಸಂಘದಲ್ಲಿ ಅಡಳಿತಮಂಡಳಿ ಹಾಗು ಸಿಬ್ಬಂದಿವರ್ಗದವರಿಗೆ ರೈತರ ನೇರ ಸಂಪರ್ಕ ಹೊಂದಿದ ಕಾರಣ ಅತ್ಯಂತ ಸುಲಭವಾಗಿ ರೈತರಿಗೆ ಸಾಲ,ಸೌಲಭ್ಯಗಳು ದೊರೆಯುತ್ತದೆ.ಇದು ರೈತರ ಬಾಳಿನ ಅಭ್ಯುದಯಕ್ಕೆ ಕಾರಣವಾಗಿದೆ. ಮನುಷ್ಯನಿಗೆ ಮಾನಸಿಕವಾಗಿ ನೆಮ್ಮದಿ,ಖುಷಿ ಇದ್ದಾಗ ಆರೋಗ್ಯಪೂರ್ಣವಾಗಿ ಬದುಕನ್ನು ಸಾಗಿಸುತ್ತಾನೆ.ಪದ್ಮಪ್ಪ ಗೌಡರವರು ಸದಾ ಹಸನ್ಮುಖಿಯಾಗಿ ತಮ್ಮ ಉದ್ಯೋಗದ ಜೂತೆ ಜೊತೆಯಲ್ಲಿ ಸಾಮಾಜಿಕ ಹಾಗು ಧಾರ್ಮಿಕವಾಗಿಯೂ ಕೆಲಸ ಕಾರ್ಯವನ್ನು ನಿರ್ವಹಿಸಿದವರು. ಇವರ ಸೇವಾ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿ ಇನ್ನು ಕೂಡ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯನಿರ್ವಹಕ ಕಾರ್ಯದರ್ಶಿ ಸೇಸಪ್ಪ ರೈ.ಕೆ ಮಾತನಾಡಿ ಪದ್ಮಪ್ಪ ಗೌಡ ರವರು ಪ್ರಾಮಾಣಿಕ ವ್ಯಕ್ತಿಯಾಗಿ ಸೇವೆ ಸಲ್ಲಿಸಿದವರು,ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ ಸಾಹಿತ್ಯ ಪ್ರೇಮಿಯಾಗಿ, ಧಾರ್ಮಿಕ ಕ್ಷೇತ್ರದಲ್ಲೂ ತನ್ನನು ತಾನು ತೊಡಗಿಸಿಕೊಂಡವರು.ಒಬ್ಬಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ವ್ಯಕ್ತಿಯಾಗಿ ತನ್ನ ಮಕ್ಕಳಿಗೂ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿದವರು. ಎಂದು ತಿಳಿಸಿ ಅವರ ವಿದ್ಯಾರ್ಥಿ ಜೀವನ ಹಾಗು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಉದ್ಯೋಗ ಸೇರಿದ ನಂತರ ಸೇವಾವಧಿಯಲ್ಲಿ ಮಾಡಿದ ಕಾರ್ಯಚಟುವಟಿಕೆಗಳನ್ನು ಸಭೆಗೆ ತಿಳಿಸಿದರು.

ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಮಾತನಾಡಿ ಪದ್ಮಪ್ಪ ಗೌಡ .ಕೆ ಯವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 15 ರೂಪಾಯಿ ಸಂಭಾವಣೆಯಲ್ಲಿ ಉದ್ಯೋಗಕ್ಕೆ ಸೇರಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇಂದು 79 ಸಾವಿರ ರೂಪಾಯಿ ಸಂಭಾವಣೆ ಪಡೆಯುತ್ತಿದ್ದಾರೆ.ಪದ್ಮಪ್ಪ ಗೌಡ.ಕೆಯವರು ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಬಹಳ ಸಮರ್ಥವಾಗಿ ನಿಭಾಯಿಸಿದವರು. ಅವರು ತಾಳ್ಮೆ ಮತ್ತು ಸಹನಶೀಲತೆಯನ್ನು ಹೊಂದಿದ ವ್ಯಕ್ತಿಯಾಗಿ ಸೇವಾ ಅವಧಿಯನ್ನು ಪೂರೈಸಿದವರು ಎಂದರು.

ಕಾರ್ಯಕ್ರಮದಲ್ಲಿ ಪದ್ಮಪ್ಪ ಗೌಡ ಹಾಗು ಅವರ ಪತ್ನಿ ಕೃಷ್ಣವೇಣಿ ಯವರನ್ನು ಆಡಳಿತ ಮಂಡಳಿಯವರು,ಸಿಬ್ಬಂದಿಗಳು ಸೇರಿ ಶಾಲು, ಹಾರ ಫಲಪುಷ್ಪ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಕ್ಯಾಂಪ್ಕೋ ವತಿಯಿಂದ ಶಾಖಾ ಮ್ಯಾನೇಜರ್ ಉದಯ ಬಿ.ಆರ್ ಹಾಗು ಸಿಬ್ಬಂದಿಗಳು,ಆಲಂಕಾರು ಜೆ.ಸಿ.ಐ ಯವರು,ಪದ್ಮಪ್ಪ ಗೌಡರ ಬಾವ ಹಾಗು ಸಂಬಂಧಿಕರು ಹಾಗು ಹಿತೈಷಿಗಳು ಶಾಲು,ಹಾರ ನೀಡಿ ಗೌರವಿಸಿದರು.

ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಪದ್ಮಪ್ಪ ಗೌಡರವರು ನನ್ನನ್ನು ದಿ.ಉಮೇಶ ರೈಮನವಳಿಕೆ ಹಾಗು ಪುರಂದರ ರೈ ಸಬಳೂರು ರವರು ಆಲಂಕಾರು ಸಿ.ಎ ಬ್ಯಾಂಕ್ ಗೆ ಉದ್ಯೋಗಕ್ಕೆ ಸೇರಿಸಿದವರು.ನಾನು ಆಲಂಕಾರು ಸಿ.ಎ ಬ್ಯಾಂಕ್ ನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ . ಅಡಳಿ ತಮಂಡಳಿ ಹಾಗು ಸಿಬ್ಬಂದಿಗಳ ಅವಿರತ ಶ್ರಮದಿಂದ ಇವತ್ತು ಸಂಸ್ಥೆ ಉತ್ತುಂಗದ ಮಟ್ಟಕ್ಕೆ ಬೆಳೆದಿದೆ.ನಷ್ಟದಲ್ಲಿದ್ದ ಸಂಸ್ಥೆ ರಮೇಶ ಭಟ್ಟ್ ಉಪ್ಪಂಗಳರವರ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿ ಇವತ್ತು ಉನ್ನತ್ತ ಮಟ್ಟಕ್ಕೆ ಏರಿದೆ.ಪ್ರಸಕ್ತ
ವಿವಿಧ ರಾಜ್ಯಗಳಿಂದ ಹಾಗು ಜಿಲ್ಲೆಗಳಿಂದ ನಮ್ಮ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಯನಕೋಸ್ಕರ ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು ಹಾಗು ಸಿಬ್ಬಂದಿಗಳು ಅಧ್ಯಯನಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರಸಕ್ತ ಅಡಳಿತ ಮಂಡಳಿಯ ಅಧ್ಯಕ್ಷ ಧರ್ಮಪಾಲ ರಾವ್ ಕಜೆ,ಹಾಗು ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಹಾಗು ನಿರ್ದೇಶಕರು ಬಹಳ ಉತ್ತಮ ರೀತಿಯಲ್ಲಿ ಮುನ್ನೆಡುಸುತ್ತಿದ್ದಾರೆ.ಮುಂದೆಯೂ ಎಲ್ಲಾ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ದಿಯಲ್ಲಿ ಶ್ರಮಿಸುವುದರೊಂದಿಗೆ ಎಲ್ಲಾ ಸಿಬ್ಬಂದಿಗಳು ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು .ನಾನು ಸೇರುವಾಗ ಸಂಸ್ಥೆ ನಷ್ಟದಲ್ಲಿದ್ದು ಸಿಬ್ಬಂದಿಗಳಿಗೆ ಸಂಬಳ ನೀಡಲೂ ಹಣವಿರಲಿಲ್ಲ.ಆದರೆ ಇವತ್ತು ರಾಜ್ಯ ಹಾಗು ಜಿಲ್ಲೆಗಳಲ್ಲಿ ಗುರುತಿಸುವ ಸಂಸ್ಥೆಯಾಗಿ ಹೊರ ಹೊಮ್ಮಿದೆ. ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಅಡಳಿತ ಮಂಡಳಿ,ಸಿಬ್ಬಂದಿಗಳಿಗೆ,ಸದಸ್ಯರಿಗೆ ಮತ್ತು ವಿವಿಧ ಇಲಾಖೆಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಮಾತನಾಡಿ ನಮ್ಮ ಅವಧಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿಗಳಿಗೆ ಬೀಳ್ಕೋಡಿಗೆ ಕಾರ್ಯಕ್ರಮವನ್ನು ಮಾಡಿದ್ದೇವೆ .ನಷ್ಟದಲ್ಲಿದ್ದ ಸಂಸ್ಥೆಯನ್ನು ಪ್ರತಿಷ್ಟಿತ ಸಂಸ್ಥೆಯನ್ನಾಗಿ ಮಾಡಿದವರು ಹಿಂದಿನ ಅಡಳಿತ ಮಂಡಳಿಯ ಅಧ್ಯಕ್ಷ ರಮೇಶ ಭಟ್ಟ್ ಉಪ್ಪಂಗಳ ಹಾಗು ತಂಡದವರು. ನಾವು ಅಧಿಕಾರ ವಹಿಸಿಕೊಂಡ ನಂತರ ಸಂಘವು ಕ್ಷೀಪ್ರ ರೀತಿಯಲ್ಲಿ ಅಭಿವೃದ್ಧಿ ಗೊಂಡಿದೆ. 450 ಕೋಟಿ ವ್ಯವಹಾರವಿದ್ದ,ವ್ಯವಹಾರ ಇದೀಗ ಅಂದಾಜು ಒಂದು ಸಾವಿರ ಕೋಟಿಯಷ್ಟು ವ್ಯವಹಾರವನ್ನು ಹೊಂದಿದೆ,ಠೇವಣಿ ಮತ್ತು ಸಾಲ ಹಾಗೂ ವಸೂಲಾತಿಯಲ್ಲೂ ಹಾಗು ಎಲ್ಲಾ ವಿಭಾಗದಲ್ಲೂ ಪ್ರಗತಿಯನ್ನು ಕಂಡಿದೆ. ಇದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಹಾಗು ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ವೇದಿಕೆಯಲ್ಲಿ ನಿರ್ದೇಶಕರಾದ ಶೇಷಪತಿ ರೈ ಗುತ್ತುಪಾಲು, ಸಂತೋಷ್ ಕುಮಾರ್ ಕುಂಞಕ್ಕು, ಮೋನಪ್ಪ ಮೂಲ್ಯ ಬೊಳ್ಳರೋಡಿ , ಆಶಾ ತಿಮ್ಮಪ್ಪ ಗೌಡ, ರಾಮಚಂದ್ರ ಏಣಿತಡ್ಕ, , ಅಣ್ಣು ನಾಯ್ಕ ಜಯಂಪಾಡಿ, ನಳಿನಿ ಕಾಯರಟ್ಟ, ಸುಧಾಕರ ಪೂಜಾರಿ ಕಲ್ಲೇರಿ, ಪದ್ಮಪ್ಪ ಗೌಡರ ಪತ್ನಿ ಕೃಷ್ಣವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಲಕ್ಷ್ಮಿನಾರಾಯಣ ರಾವ್ ಆತೂರು ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ, ಕೊಯಿಲ ಶಾಖಾ ಮ್ಯಾನೇಜರ್ ಆನಂದ ಗೌಡ ಪಜ್ಜಡ್ಕ ವಂದಿಸಿ, ಸಿಬ್ಬಂದಿ ಲೋಕನಾಥ ರೈ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳು ಸಹಕರಿಸಿದರು

ಕಾರ್ಯಕ್ರಮದಲ್ಲಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಮುಖ್ಯ ಹಾಗು ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳು,ಸಂಘದ ಸದಸ್ಯರು, ಪದ್ಮಪ್ಪ ಗೌಡರ ಹಿತೈಷಿಗಳು, ಸಂಬಂಧಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here