ಪುತ್ತೂರು ದಿ ವೆಬ್ ಪೀಪಲ್ ಅವರ ಡಿಜಿಟಲ್ ಮಾರ್ಕೆಟಿಂಗ್ ‘ಸ್ಕೇಲ್’ ವಿಭಾಗ ಉದ್ಘಾಟನೆ

0

ಪುತ್ತೂರಿನ ವಾಣಿಜ್ಯ ಉದ್ಯಮಗಳಿಗೆ ಪ್ರಯೋಜನಕಾರಿಯಾಗಲಿ-ಕೇಶವಪ್ರಸಾದ್ ಮುಳಿಯ
ಪುತ್ತೂರು ಬೆಳೆದಂತೆ ಜ್ಞಾನದ ಸಂಪತ್ತು ಅಗತ್ಯ-ಜಿ.ಎಲ್.ಬಲರಾಮ ಆಚಾರ್ಯ
ದೊಡ್ಡ ಸಾಧನೆಗೆ ಪೂರಕ ವಾತಾವರಣವಿದೆ-ಪೃಥ್ವಿ
ಮಾರ್ಕೆಟಿಂಗ್ ಡಿವಿಜನ್‌ನಲ್ಲಿ ಬ್ರಿಡ್ಜ್‌ನ ಮಾದರಿಯಲ್ಲಿರಬೇಕು-ಬ್ರಿಜೇಶ್ ಚೌಟ
ವಿಶೇಷ ಶಕ್ತಿ ಇರುವ ಟೀಮ್ ಇದೆ-ಡಾ.ಹರಿಕೃಷ್ಣ ಪಾಣಾಜೆ
ಸಂಸ್ಥೆ ಅಭಿವೃದ್ಧಿ ಹೊಂದಲಿ-ಉಜ್ವಲ್ ಪ್ರಭು
ಯಾವ ಕ್ಲೈಂಟ್ ಇಲ್ಲದೇ ಆರಂಭಿಸಿದ್ದೆ-ಆದಿತ್ಯ ಕಲ್ಲೂರಾಯ

ಪುತ್ತೂರು:ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಸೈನ್ ಮತ್ತು ಗ್ರಾಫಿಕ್ ಡಿಸೈನ್‌ನಲ್ಲಿ ಐದು ವರ್ಷಕ್ಕೂ ಹೆಚ್ಚಿನ ಅನುಭವವನ್ನು ಹೊಂದಿರುವ ಸಾಫ್ಟ್ ವೇರ್ ಅಭಿವೃದ್ಧಿ ಕಂಪನಿ ದಿ ವೆಬ್ ಪೀಪಲ್‌ನ ಹೊಸ ಡಿಜಿಟಲ್ ಮಾರ್ಕೆಟಿಂಗ್ ವಿಭಾಗ ಸ್ಕೇಲ್‌ನ ಉದ್ಘಾಟನೆ ನ.30ರಂದು ಪುತ್ತೂರು ಜಿ.ಎಲ್.ಟ್ರೇಡ್ ಸೆಂಟರ್‌ನ ಮೂರನೆ ಮಹಡಿಯಲ್ಲಿ ನಡೆಯಿತು.


ಪುತ್ತೂರಿನ ವಾಣಿಜ್ಯ ಉದ್ಯಮಗಳಿಗೆ ಉತ್ತಮ ಪ್ರಯೋಜನಕಾರಿಯಾಗಲಿ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಮುಳಿಯ ಸಮೂಹ ಸಂಸ್ಥೆಗಳ ಸಿಎಂಡಿ ಕೇಶವಪ್ರಸಾದ್ ಮುಳಿಯ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಅವರು ಮಾತನಾಡಿ ಇವತ್ತು ಜ್ಞಾನ ಸಮುದ್ರ ಎಂಬುದು ವೆಬ್.ಹಿಂದೆ ಹಲವು ವಿಚಾರಗಳನ್ನು, ಮಾಹಿತಿಗಳನ್ನು ಪ್ರತ್ಯೇಕ ವಿಭಾಗದಲ್ಲಿ ಪಡೆಯಬೇಕಾಗಿತ್ತು. ಇವತ್ತು ಅವೆಲ್ಲವನ್ನೂ ಒಟ್ಟಾಗಿ ಒಂದು ಜಾಗದಲ್ಲಿ ಸಿಗುವ ವ್ಯವಸ್ಥೆಯಿದೆ.ಇಂತಹ ವ್ಯವಸ್ಥೆಗೆ ವೆಬ್‌ಪೀಪಲ್ ಉತ್ತಮ ಉದಾಹರಣೆಯಾಗಿದೆ.ಸಂಸ್ಥೆಯ ಸಿಇಒ ಆದಿತ್ಯ ಕಲ್ಲೂರಾಯ ಅವರು ಜೀವನವನ್ನು ಸವಾಲಾಗಿ ಸ್ವೀಕರಿಸಿ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.ಅವರ ಜೊತೆ ಶರತ್, ಸ್ನೇಹಿತ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾರೆ.ಮುಳಿಯ ಸಂಸ್ಥೆಗೂ ಉತ್ತಮ ಸಂಪರ್ಕವಿದೆ.ಮುಂದಿನ ದಿನ ಈ ಸಂಸ್ಥೆಯಿಂದ ಪುತ್ತೂರಿನ ವಾಣಿಜ್ಯ ಉದ್ಯಮಗಳಿಗೆ ಇನ್ನೂ ಹೆಚ್ಚಿನ ಪ್ರಯೋಜನವಾಗಲಿ ಎಂದು ಶುಭಹಾರೈಸಿದರು.


ಪುತ್ತೂರು ಬೆಳೆದಂತೆ ಜ್ಞಾನದ ಸಂಪತ್ತು ಅಗತ್ಯ:
ಜಿ.ಎಲ್ ಸಮೂಹ ಸಂಸ್ಥೆಗಳ ಚೇರ್ಮೆನ್ ಬಲರಾಮ ಆಚಾರ್ಯ ಅವರು ಮಾತನಾಡಿ,ವೆಬ್ ಪೀಪಲ್ ಇವತ್ತು ಪುತ್ತೂರಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.ಪುತ್ತೂರು ಬೆಳೆದಂತೆ ಜ್ಞಾನದ ಸಂಪತ್ತು ಅಗತ್ಯ.ಅದಕ್ಕೆ ತಕ್ಕಂತೆ ವೆಬ್‌ಪೀಪಲ್ ಸೇವೆ ಲಭ್ಯವಿದೆ.ಮುಂದಕ್ಕೆ ಯಶಸ್ಸಿನ ಹಂತದಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.


ದೊಡ್ಡ ಸಾಧನೆಗೆ ಪೂರಕ ವಾತಾವರಣವಿದೆ:
ಇನೋಟೆಕ್, ಜಪಾನೀಸ್ ಪಬ್ಲಿಕ್ ಉದ್ಯಮದ ನಿರ್ವಹಣಾ ಅಧಿಕಾರಿ ಪೃಥ್ವಿ ಭಟ್ ಅವರು ಮಾತನಾಡಿ ದಕ್ಷಿಣ ಕನ್ನಡದಲ್ಲಿ ದೊಡ್ಡ ಸಾಧನೆಗೆ ಅವಕಾಶವಿದೆ.ಅದಕ್ಕೆ ಪೂರಕವಾದ ವಾತಾವರಣ ಇದೆ.ನಮ್ಮಲ್ಲಿನ ಉದ್ಯಮಕ್ಕೆ ಸರ್ವಿಸ್ ಕೊಡುವ ಅವಶ್ಯಕತೆ.ಇದನ್ನು ಪೂರ್ಣ ಮಟ್ಟದಲ್ಲಿ ಸಂಸ್ಥೆ ಬಳಸಿಕೊಳ್ಳಲಿ ಎಂದರು.


ಮಾರ್ಕೆಟಿಂಗ್ ಡಿವಿಜನ್‌ನಲ್ಲಿ ಬ್ರಿಡ್ಜ್‌ನ ಮಾದರಿಯಲ್ಲಿರಬೇಕು:
ಮಾಜಿ ಸೈನಾಧಿಕಾರಿ,ಉದ್ಯಮಿ ಹಾಗೂ ರಾಜಕೀಯ ಮುಂದಾಳು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ ಭಾರತ ದೇಶ ಅಭಿವೃದ್ಧಿ ಆಗಲು 20 ವರ್ಷದ ಹಿಂದೆ ಅವಕಾಶ ಇರಲಿಲ್ಲ. ಇವತ್ತು ಈ ಅವಕಾಶ ಜಾಸ್ತಿಯಾಗಿದೆ.ಇಂತಹ ಸಂದರ್ಭದಲ್ಲಿ ಇಂತಹ ವೆಬ್ ಪೀಪಲ್ ಸಂಸ್ಥೆ ಅಗತ್ಯವಾಗಿದೆ.ಈ ಸಂಸ್ಥೆ ಮಾರ್ಕೆಟಿಂಗ್ ವಿಭಾಗದಲ್ಲಿ ಸೇತುವೆಯಂತೆ ಕೆಲಸ ನಿರ್ವಹಿಸಲಿ ಎಂದರು.

ವಿಶೇಷ ಶಕ್ತಿ ಇರುವ ಟೀಮ್ ಇದೆ:
ಎಸ್‌ಡಿಪಿ ರೆಮೆಡೀಸ್ ಸಂಸ್ಥೆಯ ಅಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ ಅವರು ಮಾತನಾಡಿ ಇವರ ಕ್ರಿಯೇಷನ್ ಬಹಳ ಅದ್ಭುತವಾಗಿ ಮೂಡಿ ಬರುತ್ತದೆ.ವಿಶೇಷ ಶಕ್ತಿ ಇರುವ ಟೀಮ್ ಇಲ್ಲಿದೆ. ಇವರ ಸಾಧನೆ ಯಾರಿಗೂ ನಿಲುಕದ್ದು.ಈ ಕ್ಷೇತ್ರ ನಮಗೆ ಆದರ್ಶವಾಗಿದೆ ಎಂದರು.


ಸಂಸ್ಥೆ ಅಭಿವೃದ್ಧಿ ಹೊಂದಲಿ:
ಯೂ ಆರ್ ಪ್ರಾಪರ್ಟೀಸ್‌ನ ಮಾಲಕ ಉಜ್ವಲ್ ಪ್ರಭು ಅವರು ಮಾತನಾಡಿ ನಾನೊಬ್ಬ ಸ್ನೇಹಿತನಾಗಿ ಎಲ್ಲಾ ಹಂತದಲ್ಲೂ ಸಹಕಾರ ನೀಡುತ್ತೇನೆ.ಸಂಸ್ಥೆಯ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.


ಯಾವ ಕ್ಲೈಂಟ್ ಇಲ್ಲದೇ ಆರಂಭಿಸಿದ್ದೆ:
ದಿ ವೆಬ್ ಪೀಪಲ್ ಇದರ ಸಿಇಒ ಆದಿತ್ಯ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇವತ್ತು ಇಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಎಂಬುದನ್ನು ನೆನೆಸಿರಲಿಲ್ಲ.ಇದಕ್ಕೆ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಯಾಕೆಂದರೆ ಯಾವ ಕ್ಲೈಂಟ್ ಇಲ್ಲದೆ ಆರಂಭಿಸಿದ ಸಂಸ್ಥೆಯಲ್ಲಿ ಯುಎಸ್‌ಎ, ಸಿಂಗಾಪುರ, ಯು.ಕೆ, ಆಸ್ಟೇಲೀಯಾಗಳಿಗೆ ಇಲ್ಲಿಂದ ಹಲವು ಕೆಲಸ ನಿರ್ವಹಿಸಿದ್ದೇವೆ. ಇವತ್ತು ಡಿಜಿಟಲ್ ಮಾರ್ಕೆಟಿಂಗ್ ದೊಡ್ಡ ಸಾಗರ.ಮಾರ್ಕೆಟಿಂಗ್‌ನಲ್ಲಿ ಡಿಮಾಂಡ್ ಇದೆ.ಆದರೆ ಪುತ್ತೂರು ಇದರಲ್ಲಿ ಹಿಂದಿದೆ.ಸರ್ವಿಸ್ ಕೊಡುವವರು ಇಲ್ಲ.ಈ ನಿಟ್ಟಿನಲ್ಲಿ ಸ್ಕೇಲ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಇನ್ನಷ್ಟು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ನೀಡಲು ಸಜ್ಜಾಗಿದ್ದೇವೆ ಎಂದರು.


ದಿ ವೆಬ್ ಪೀಪಲ್ ಇದರ ಇನ್ನೋರ್ವ ಸಿಓಓ ಶರತ್ ಶ್ರೀನಿವಾಸ ಅವರು ಸ್ವಾಗತಿಸಿ ಮಾತನಾಡಿ ಸ್ಕೇಲ್‌ನ ಆರಂಭವು ನಮ್ಮ ಕ್ಲೈಂಟ್‌ಗಳಿಗೆ ಇನ್ನಷ್ಟು ಉತ್ತಮ ಮತ್ತು ನವೀನ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವಲ್ಲಿ ಒಂದು ಪ್ರಮುಖ ಹೆಜ್ಜೆ.ನಾವು ಗ್ರಾಹಕರ ಅಗತ್ಯಗಳನ್ನು ಆಳವಾಗಿ ಅರ್ಥೈಸಿ, ಅವರ ವ್ಯಾಪಾರವನ್ನು ಹೊಸ ಮಟ್ಟಕ್ಕೆ ತಲುಪಿಸಲು ಸ್ಕೇಲ್‌ನ ಸೇವೆಗಳು ಸಹಾಯ ಮಾಡಲಿದೆ.ಸ್ಕೇಲ್ ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಸೈನ್ ಮತ್ತು ಗ್ರಾಫಿಕ್ ಡಿಸೈನ್‌ನಂತಹ ದಿ ವೆಬ್ ಪೀಪಲ್ ಅವರ ಪ್ರಸ್ತುತ ಸೇವೆಗಳ ಜೊತೆಗೆ ಕಾರ್ಯ ನಿರ್ವಹಿಸಲಿದ್ದು, ಕಂಪನಿಯು ತನ್ನ ಗ್ರಾಹಕರಿಗೆ ತಮ್ಮ ಉದ್ಯಮದ ಡಿಜಿಟಲ್ ಅವಶ್ಯಕತೆಗಳನ್ನು ಇನ್ನಷ್ಟು ವ್ಯಾಪಕವಾಗಿ ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.ರವಿಶಂಕರ್, ಶ್ರೀನಿವಾಸ್, ವಾಮನ್ ಪೈ, ಅರುಣ್, ಸಾಗರ್ ಅತಿಥಿಗಳನ್ನು ಗೌರವಿಸಿದರು.ಸಮಾರಂಭದಲ್ಲಿ ಅನೇಕ ಮಂದಿ ಉದ್ಯಮಿಗಳು ಆಗಮಿಸಿದ್ದರು.

LEAVE A REPLY

Please enter your comment!
Please enter your name here