ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಅರ್ಧ ಶತಮಾನದಿಂದಲೂ ರಥ ಕಟ್ಟುತ್ತಿದ್ದ ಕಲಾಕಾರ ಅಂಗಾರ ಮಲೆಕುಡಿಯ ನಿಧನ

0

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲನಿ ನಿವಾಸಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವು ವರ್ಷಗಳಿಂದಲೂ ರಥ ಕಟ್ಟುವ ಕೆಲಸ ಮಾಡುತಿದ್ದ ಅಂಗಾರ ಮಲೆಕುಡಿಯ (85) ಅವರು ನ.17 ರಂದು ನಿಧನರಾದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಮಾರು 55 ವರ್ಷಗಳ ಕಾಲ ರಥ ಕಟ್ಟುವ ಕೆಲಸ ಮಾಡುತ್ತಿದ್ದರು.

ಮೃತರು ಪತ್ನಿ ವೆಂಕಮ್ಮ ಪುತ್ರಿಯರಾದ ಕಮಲ ಕಾಸರಗೋಡು ಕೊಜಪ್ಪೆ, ಪದ್ಮಾವತಿ ಶಿಶಿಲ, ತನುಜ ಅರಮನೆಗಯ ಪುತ್ರರಾದ ರೋಹಿತ್, ಸುಂದರ, ದಿನಕರ ಅಶೋಕ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here