ಮುಂಡೂರು ಶಾಲೆಯಲ್ಲಿ ಮಕ್ಕಳ ರಕ್ತದ ಗುಂಪಿನ ವರ್ಗೀಕರಣ

0

ಪುತ್ತೂರು: ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ವತಿಯಿಂದ ಬ್ಲಡ್ ಸೆಂಟರ್ ಇದರ ಚೇರ್‌ಮೆನ್ ಜೈರಾಜ್ ಭಂಡಾರಿ ಹಾಗೂ ಮೆಡಿಕಲ್ ಆಫೀಸರ್ ಡಾ.ರಾಮಚಂದ್ರ ಭಟ್ ಅವರ ಸಹಕಾರದೊಂದಿಗೆ ಮುಂಡೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ರಕ್ತದ ಗುಂಪಿನ ವರ್ಗೀಕರಣ ಮಾಡಲಾಯಿತು.
ಟೆಕ್ನಿಕಲ್ ಸೂಪರ್‌ವೈಸರ್ ಸಜಿನಿ ಮಾರ್ಟಿಸ್ ಹಾಗೂ ಟೆಕ್ನೀಷಿಯನ್ ನಮೃತ ಇವರು 43 ವಿದ್ಯಾರ್ಥಿಗಳ ರಕ್ತದ ಗುಂಪಿನ ವರ್ಗೀಕರಣ ಮಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು, ಮುಖ್ಯಗುರು ವಿಜಯ ಪಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here