ಅರಿಯಡ್ಕ: ಪುತ್ತಿಲ ಪರಿವಾರ, ವಿಷ್ಣುಯುವಶಕ್ತಿ ಬಳಗದಿಂದ ಶ್ರಮದಾನ

0

ಪುತ್ತೂರು: ಪುತ್ತಿಲ ಪರಿವಾರ ಶೇಖಮಲೆ ಮತ್ತು ತ್ಯಾಗರಾಜ ನಗರ ಹಾಗೂ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಅರಿಯಡ್ಕ ಗ್ರಾಮದ ಪಿಲಿಕೊಟ್ಯ ರೇವತಿ ರೈಯವರ ಮನೆಯ ಸುತ್ತಮುತ್ತ ಸ್ವಚ್ಛತೆ ಮಾಡಿ, ಮನೆಯ ಎದುರು ಶ್ರಮದಾನದ ಮೂಲಕ ಸಿಮೆಂಟ್ ಶೀಟ್ ಹಾಕಿಕೊಡಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಅರಿಯಡ್ಕ ಗ್ರಾಮದ ಅಧ್ಯಕ್ಷ ಗೋವಿಂದ ಮಣಿಯಾಣಿ, ಗೌರವ ಅಧ್ಯಕ್ಷ ನಾರಾಯಣ ಪೂಜಾರಿ ಮಡ್ಯ೦ಗಳ, ಅರಿಯಡ್ಕ ಗ್ರಾಮ 182 ರ ಪುತ್ತಿಲ ಪರಿವಾರದ ವಾರ್ಡ್ ಅಧ್ಯಕ್ಷ ಸುದರ್ಶನ್ ರೈ , 182 ರ ಪುತ್ತಿಲ ಪರಿವಾರದ ವಾರ್ಡ್ ಅಧ್ಯಕ್ಷ ಯತೀಶ್ ಮಡಿವಾಳ ಕೋಡಿಯಡ್ಕ, ವಿಷ್ಣು ಯುವಶಕ್ತಿ ಮಜ್ಜಾರಡ್ಕ ಇದರ ಸಂಘಟನ ಕಾರ್ಯದರ್ಶಿ ರಾಜೇಶ್ ಕೆ ಮಯೂರ, ಪ್ರವೀಣ್ ರೈ, ಸುಕೇಶ್ ರೈ ,ದಾಮೋದರ ರೈ , ನಾರಾಯಣ ಪೂಜಾರಿ ಮಡ್ಯಂಗಳ, ಜಯರಾಜ ಗೌಡ ,ವಿಶ್ವಾತ್ ,ಉಮೇಶ್ , ಸೀತಾರಾಮ, ಕೀರ್ತನ್ ಕೊಂಬರಡ್ಕ, ಮುನ್ನ ಕೊಂಬರಡ್ಕ, ಸೃಜನ್ ಮಜ್ಜಾರಡ್ಕ ಶ್ರಮದಾನದಲ್ಲಿ ಭಾಗವಹಿಸಿದ್ದರು. ಚಿತ್ರ: ಶ್ರಮದಾನ

LEAVE A REPLY

Please enter your comment!
Please enter your name here