ಸಾಲೆತ್ತೂರು: ಅಕ್ರಮ ಮರಳು ದಾಸ್ತಾನು ಪತ್ತೆ

0

ವಿಟ್ಲ: ಅಕ್ರಮವಾಗಿ ಮರಳು ಶೇಖರಿಸಿಟ್ಟಿರುವ ಆರೋಪದಲ್ಲಿ ಮೂವರ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿಗಳಾದ ಸುದೇಶ್ ಭಂಡಾರಿ, ಷರೀಫ್, ನಾರಾಯಣ ಪೂಜಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಟ್ಲ ಪೊಲೀಸ್‌ ಠಾಣಾ ಎಸ್.ಐ ಹಾಗೂ ಸಿಬ್ಬಂದಿಗಳ ತಂಡ, ಡಿ.5 ರಂದು ಸಂಜೆ ಬಂಟ್ವಾಳ ತಾಲೂಕು, ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿ ಸುದೇಶ್ ಭಂಡಾರಿ ಎಂಬವರ ಜಾಗದಲ್ಲಿ, ಅಕ್ರಮವಾಗಿ ಶೇಖರಿಸಿರುವ, ಅಂದಾಜು 1.25 ಲಕ್ಷ ಮೌಲ್ಯದ ಸುಮಾರು 20 ರಿಂದ 25 ಲೋಡ್ ಮರಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here