ಡಿ.10: ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗದ ದಶಮಾನೋತ್ಸವ ಸಂಭ್ರಮ, ಸನ್ಮಾನ, ತಾಳಮದ್ದಳೆ

0

ಪುತ್ತೂರು: ಧೀಶಕ್ತಿ ಮಹಿಳಾ ಯಕ್ಷ ಬಳಗ ಮತ್ತು ಧೀಶಕ್ತಿ ಬಾಲಿಕಾ ಯಕ್ಷ ಬಳಗ ತೆಂಕಿಲ ಪುತ್ತೂರು ಇದರ ದಶಮಾನೋತ್ಸವ ಸಂಭ್ರಮ, ಯಕ್ಷಗಾನ ತಾಳಮದ್ದಳೆ, ಸನ್ಮಾನ ಕಾರ್ಯಕ್ರಮ ಡಿ.10 ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದ ನಟರಾಜ ವೇದಿಕೆಯಲ್ಲಿ ಜರಗಲಿದೆ.

ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ್ ಆಚಾರ್ಯ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅಬ್ಯಾಗತರಾಗಿ ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ಸಂಯೋಜಕ ಸುಬ್ರಾಯ ಸಂಪಾಜೆ ಆಗಮಿಸಲಿದ್ದಾರೆ. ಮಹಿಳಾ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಮುಖ್ಯಸ್ಥ ವಾಸುದೇವ ರಾವ್ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣವನ್ನು ಕಣಿಪುರ ಮಾಸ ಪತ್ರಿಕೆಯ ಸಂಪಾದಕರಾದ ಎಂ ನಾ ಚಂಬಲ್ತಿಮಾರ್ ರವರು ನಿರ್ವಹಿಸಲಿದ್ದಾರೆ. ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಅರ್ಚಕರು, ಕಲಾ ಪೋಷಕರಾದ ಶ್ರೀರಾಮಕಲ್ಲೂ ರಾಯರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ.


ಯಕ್ಷಗಾನ ತಾಳಮದ್ದಳೆ
ಸಭಾ ಕಾರ್ಯಕ್ರಮದ ಬಳಿಕ, “ವೀರಮಣಿ ಕಾಳಗ”, ಎನ್ನುವ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಮಹೇಶ್ ಕನ್ಯಾಡಿ, ಶ್ರೀ ಶಂಕರನಾರಾಯಣ ಭಟ್ ಪದ್ಯಾಣ, ಪಿ.ಜಿ .ಜಗನ್ನಿವಾಸ ರಾವ್, ಮತ್ತು ಮುಮ್ಮೇಳದಲ್ಲಿ, ಪದ್ಮಾ ಆಚಾರ್ಯ, ಸುಮಂಗಲಾ ರತ್ನಾಕರ್ ,ಪ್ರೇಮಾ ಕಿಶೋರ್ ಶ್ರೀವಿದ್ಯಾ ಜೆ ರಾವ್, ಶಾಲಿನಿ ಅರುಣ್ ಶೆಟ್ಟಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಬಳಿಕ, ಬಾಲಿಕಾ ತಂಡದಿಂದ “ಧುರವೀಳ್ಯ- ಕರ್ಣಬೇಧನ”, ಮತ್ತು ಮಹಿಳಾ ತಂಡದ ಸದಸ್ಯೆಯರಿಂದ “ದಶ-ಧ್ವನಿ”,ಎಂಬ ತಾಳಮದ್ದಲೆಯು ನಡೆಯಲಿದೆ. ಹಿಮ್ಮೇಳದಲ್ಲಿ ಕು|ರಚನಾ ಚಿದ್ಗಲ್, ಕು| ಸಿಂಚನ ಮೂಡು ಕೋಡಿ, ಸತ್ಯನಾರಾಯಣ ಅಡಿಗ, ಲಕ್ಷ್ಮೀಶ ಶಗ್ರಿತಾಯ, ಮಾ| ಅದ್ವೈತ್ ಕನ್ಯಾನ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಅನುಪಮಾ ತಲಂಜೇರಿ, ಅಭಿಜ್ಞಾ ದಾಳಿಂಬ, ಶರಣ್ಯ ರಾವ್, ವರ್ಷಾ ಕೆ.ಟಿ, ವಿಖ್ಯಾತಿ ಬೆಜ್ಜಂಗಳ, ಅನನ್ಯಾ ಕೊಡಂಕಿರಿ,ಅಭಿಕ್ಷ ರಾವ್ ಮತ್ತು “ದಶ-ಧ್ವನಿ”ಯಲ್ಲಿ ಜಯಲಕ್ಷ್ಮಿ ವಿ ಭಟ್, ಹೀರಾ ಉದಯ್ ,ಪ್ರೇಮಾ ನೂರಿತ್ತಾಯ, ಶಂಕರಿ ಶರ್ಮ, ಶಾಲಿನಿ ಅರುಣ್ ಶೆಟ್ಟಿ, ಶುಭ ಪಿ ಆಚಾರ್ಯ, ಸ್ವಪ್ನ ಉದಯ್, ಮಮತಾ ಪ್ರಕಾಶ್, ಶೃತಿ ವಿಸ್ಮಿತ್ ಬಲ್ನಾಡು, ಮಲ್ಲಿಕಾ ಜೆ ರೈ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here