DPL ಡ್ಯಾನ್ಸ್ ಲೀಗ್ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ – ಅದಿತಿ ಕುಂಡಡ್ಕ ನಾಯಕತ್ವದ ತಂಡ ಪ್ರಥಮ

0

ಪುತ್ತೂರು: ನಮ್ಮ ಟಿ.ವಿ ಕುಡ್ಲ ಪ್ರಸ್ತುತ ಪಡಿಸುತ್ತಿರುವ DPL ಡ್ಯಾನ್ಸ್ ಲೀಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅದಿತಿ ಕುಂಡಡ್ಕ ತಂಡ ಅಂತಿಮವಾಗಿ ಫಿನಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತದೆ. ಅದಿತಿ ಕುಂಡಡ್ಕ ಅವರು ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಕುಂಡಡ್ಕ ಗಾಯತ್ರಿ ಸುರೇಶ್ ರವರ ಪುತ್ರಿ.

ಅದಿತಿ ಕುಂಡಡ್ಕ ತಂಡದಲ್ಲಿ ಆಲಂಕಾರು ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಶಾರ್ವಿ ಸುರುಳಿ(ಉಷಾರವೀಂದ್ರ ರೈ -ಸುರುಳಿ ಅವರ ಪುತ್ರಿ), ಸಮೀಕ್ಷಾ ಕೆದ್ದೋಟ್ಟೆ,ಸಾತ್ವಿಕ ಕೆದ್ದೋಟ್ಟೆ (ಶೇಖರ ಗೌಡ ಕೆದ್ದೋಟ್ಟೆ ಯವರ ಪುತ್ರಿಯರು) ಭಾಗವಹಿಸಿದ್ದಾರೆ. ಈಕೆಯು BWDC ಆಲಂಕಾರು ತಂಡದ ಶಿರೋನಾಮೆಯೊಂದಿಗೆ ಭಾಗವಹಿಸಿದ್ದು, ಈಕೆಗೆ ಕೊರಿಯೋಗ್ರಾಫರ್ ಆನಂದ ಬಂಗೇರ ಬಿ.ಸಿ ರೋಡ್ ತಂಡದವರು ನೃತ್ಯ ನಿರ್ದೇಶನ ಮಾಡಿದ್ದಾರೆ.

LEAVE A REPLY

Please enter your comment!
Please enter your name here