ಡಿ.11: ಮೊ| ಆಂಟನಿ ಪತ್ರಾವೊ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ -ನವೀಕೃತ ಯೋಜನೆಗಳ ಉದ್ಘಾಟನೆ, ಪ್ರತಿಮೆ ಅನಾವರಣ

0

ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕಾರಣಿಕರ್ತರಾದ ಮೊ| ಆಂಟನಿ ಪತ್ರಾವೊ ಇವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆಯನ್ನು ಡಿಸೆಂಬರ್ 11 ರಂದು ಆಚರಿಸಲಾಗುವುದು. ಬೆಳಿಗ್ಗೆ 9 ಘಂಟೆಗೆ ಮಾಯ್ ದೆ ದೇವುಸ್ ಚರ್ಚಿನಲ್ಲಿ ದಿವ್ಯ ಬಲಿಪೂಜೆಯ ನೆರವೇರುವುದು. ತದನಂತರ 10 ಗಂಟೆಗೆ ಸಂತ ಪಿಲೋಮಿನಾ ಕ್ಯಾಂಪಸ್ ಆವರಣದಲ್ಲಿ ಮೊ| ಆಂಟನಿ ಪತ್ರಾವೊ ಇವರ ನೂತನ ಪ್ರತಿಮೆ ಅನಾವರಣ ಮಾಡಲಾಗುವುದು. ಈ ನೂತನ ಪ್ರತಿಮೆಯನ್ನು ಸಂಸ್ಥೆಯ ಹಳೆ ವಿದ್ಯಾರ್ಥಿ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ ರವರು ದಾನವಾಗಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಂತ ಫಿಲೋಮಿನಾ ಕಾಲೇಜಿನ ನವೀಕೃತ ಹವಾನಿಯಂತ್ರಿತ ಕಂಪ್ಯೂಟರ್ ಪ್ರಯೋಗಾಲಯ, ನವೀಕೃತ ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆ, ನೂತನ ಮೊ| ಆಂಟನಿ ಪತ್ರಾವೊ ಸಭಾಂಗಣವನ್ನು ಉದ್ಘಾಟಿಸಿ ಆಶೀರ್ವಚನ ಮಾಡಲಾಗುವುದು ಎಂದು ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here