ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯಿಂದ ಪುತ್ತೂರು ಪ್ರಧಾನ ಅಂಚೆ ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ

0

ಪುತ್ತೂರು: ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ನ್ಯಾಯಯುತ ಬೇಡಿಕೆಗಳ ಜಾರಿಗೆ ಒತ್ತಾಯಿಸಿ ಡಿ.12ರಿಂದ ಪುತ್ತೂರು ಪ್ರಧಾನ ಅಂಚೆ ಕಚೇರಿ ಎದುರುಗಡೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ.

ಸುಳ್ಯ, ಪುತ್ತೂರು, ಕಾರ್ಕಳ, ಬಂಟ್ವಾಳ ತಾಲೂಕು ಒಳಗೊಂಡ ಪುತ್ತೂರು ವಿಭಾಗೀಯ ಮಟ್ಟದ ಗ್ರಾಮೀಣ ಅಂಚೆ ಸೇವಕರು ಪ್ರತಿಭಟನೆಯಲ್ಲಿ ಪಾಲೊಂಡಿದ್ದಾರೆ. ಆಲ್ ಇಂಡಿಯ ಗ್ರಾಮೀಣ ಡಾಕ್ ಸೇವಕ್ ಯೂನಿಯನ್ ಪುತ್ತೂರು ಇದರ ಕಾರ್ಯದರ್ಶಿ ಸುನಿಲ್ ದೇವಾಡಿಗ ಮಾತನಾಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಯೂನಿಯನ್‌ನ ಅಧ್ಯಕ್ಷ ವಿಠಲ ಎಸ್. ಪೂಜಾರಿ, ಕೋಶಾಧಿಕಾರಿ ಕಮಲಾಕ್ಷ ಹಾಗೂ ಪದಾಧಿಕಾರಿಗಳು, ಸದಸ್ಯರು, ನೌಕರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here