ಡಿ.20: ಕುಂತೂರು ಮಾರ್‌ಇವಾನಿಯೋಸ್ ಆಂಗ್ಲಮಾಧ್ಯಮ ಶಾಲಾ ವಾರ್ಷಿಕೋತ್ಸವ

0

ಪೆರಾಬೆ: ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾನಗರ ಕುಂತೂರು ಇಲ್ಲಿನ 2023-24ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವ ’ಐವಾನಿಯಾ-2023’ ಡಿ.20ರಂದು ಸಂಜೆ 5 ಗಂಟೆಯಿಂದ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.


ಸಂಜೆ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ರೆ.ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್‌ರವರು ಭಾಗವಹಿಸಲಿದ್ದಾರೆ. ಪ್ರೊವಿನಿಶಿಯಲ್ ಸುಪಿರಿಯರ್ ಅಲ್ಫೋನ್ಸಾ ಜೇಕಬ್ ಡಿ.ಎಂ.ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಹಿರಿಯ ವಿದ್ಯಾರ್ಥಿ ಸಂಘದ ಪ್ರತಿನಿಧಿ ಡಾ.ಆದಂ ಶಾಕೀರ್, ಫಾ.ಡೆನಿಯಲ್ ಕಡಕಮ್‌ಪಲಿಲ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಕೆ.,ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಶಾಲಾ ಮುಖ್ಯಶಿಕ್ಷಕಿ ಸಿ| ಅಲೆನ್ ಮೇರಿ ಡಿ.ಎಂ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here