ಭಾಗವತ ಕುರಿಯ ಗಣಪತಿ ಶಾಸ್ತ್ರಿರವರಿಗೆ ಅಭಿನಂದನೆ, ಗಾನಗಾರುಡಿ ಬಿರುದು ಪ್ರದಾನ

0

*ಕುರಿಯ ಎಂಬುದು ಯಕ್ಷಗಾನ ಕ್ಷೇತ್ರಕ್ಕೆ ಆಚಾರ್ಯಪೀಠ ಇದ್ದಹಾಗೆ-ಡಾ|ಟಿ.ಶ್ಯಾಮ್ ಭಟ್
*ನನ್ನ ಮೂಲಕ ನನ್ನ ಹಿರಿಯರನ್ನು, ಕುರಿಯ ಮನೆತನವನ್ನು ಗೌರವಿಸಿದ್ದೀರಿ-ಕುರಿಯ ಗಣಪತಿ ಶಾಸ್ತ್ರಿ
*ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ-ಅಚ್ಯುತ ಮೂಡೆತ್ತಾಯ
*ಸನ್ಮಾನ ಮಾಡುವ ಭಾಗ್ಯ ನನಗೆ ಸಿಕ್ಕಿದೆ-ವೇ.ಮೂ.ಕೃಷ್ಣ ಉಪಾಧ್ಯಾಯ

ಪುತ್ತೂರು: ಹನುಮಗಿರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಯಕ್ಷಗಾನದ ಪಾರಂಪರಿಕ ಸಂಭ್ರಮ, ಯಕ್ಷಪರಂಪರೆಯ ಭಾಗವತ ಕುರಿಯ ಗಣಪತಿ ಶಾಸ್ತ್ರೀಗಳಿಗೆ ಅಭಿನಂದನಾ ಕಾರ್ಯಕ್ರಮ, ಗಾನಗಾರುಡಿ ಬಿರುದುಪ್ರದಾನ ಕಾರ್ಯಕ್ರಮ ನಡೆಯಿತು.

ಅವರ ಗರಡಿಯಲ್ಲಿ ಹಲವು ಮಹಿಷಾಸುರ ಪಾತ್ರಧಾರಿಗಳು ಪಳಗಿದ್ದಾರೆ-ಡಾ|ಟಿ.ಶ್ಯಾಮ ಭಟ್ : ಮಾನವ ಹಕ್ಕುಗಳ ಆಯೋಗದ ಆಡಳಿತಾತ್ಮಕ ಸದಸ್ಯ ಡಾ|ಟಿ.ಶ್ಯಾಮ್ ಭಟ್ ಮಾತನಾಡಿ ಕುರಿಯ ಎಂಬುದು ಯಕ್ಷಗಾನ ಕ್ಷೇತ್ರಕ್ಕೆ ಆಚಾರ್ಯಪೀಠ ಇದ್ದಹಾಗೆ. ಕುರಿಯ ಮನೆತನದ ಹಿರಿಯ ಸದಸ್ಯ ಕುರಿಯ ಗಣಪತಿ ಶಾಸ್ತ್ರಿರವರು ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಉತ್ತಮ ಕಲಾವಿದರಾಗಿದ್ದರು. ಬಳಿಕ ಕಟೀಲು ಮೇಳದಲ್ಲಿ ಭಾಗವತರಾಗಿ ಬೆಳೆದರು. ಹಲವು ಮಹಿಷಾಸುರ ಪಾತ್ರಗಳನ್ನು ಬೆಳೆಸಿದ ಕೀರ್ತಿ ಇವರಿಗಿದೆ. ಅವರ ಗರಡಿಯಲ್ಲಿ ಹಲವು ಮಹಿಷಾಸುರ ಪಾತ್ರಧಾರಿಗಳು ಪಳಗಿದ್ದಾರೆ. ರಂಗನಾಯಕ ಬಿರುದು ಪಡೆದ ಹಿರಿಯ ಭಾಗವತರು. ಇವತ್ತು ಹಲವು ಕಲಾವಿದರು ಇವರ ಮಾರ್ಗದರ್ಶನ ಪಡೆಯುತ್ತಿದ್ದಾರೆ ಎಂದರು. ಇವರ ಒಡನಾಟ ನನಗೂ ಇದೆ. ನಾನು ಗೌರವದಿಂದ ಕಾಣುವ ಶ್ರೇಷ್ಟ ಭಾಗವತರಲ್ಲಿ ಇವರೂ ಒಬ್ಬರು. ಕಲಾಸೇವೆಗೆ ಅವರನ್ನು ಗುರುತಿಸಿ ಹಲವು ಅಭಿನಂದನಾ ಕಾರ್ಯಕ್ರಮ ನಡೆದಿದೆ. ಇಂದು ಹನುಮಗಿರಿ ಕ್ಷೇತ್ರದಿಂದ ಅಭಿನಂದನೆ ನಡೆಯುತಿದೆ. ಅವರ ಮುಂದಿನ ಜೀವನ ಯಶಸ್ಸು ಪಡೆಯಲಿ ಎಂದರು.

ಮರುಜನ್ಮ ಇದ್ದರೆ ಕುರಿಯ ಮನೆತನದಲ್ಲಿಯೇ ಹುಟ್ಟಬೇಕು – ಕುರಿಯ ಗಣಪತಿ ಶಾಸ್ತ್ರಿ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುರಿಯ ಗಣಪತಿ ಶಾಸ್ತ್ರೀರವರು ಇವತ್ತು ಮಹಾಲೇಶ್ವರ ಭಟ್‌ರವರ ನೇತೃತ್ವದಲ್ಲಿ ಸನ್ಮಾನ ಮಾಡಿದ್ದೀರಿ. ಕಲಾವಿದ ತನ್ನ ಕ್ಷೇತ್ರದಿಂದ ಹಿಂದೆ ಸರಿದರೆ ಮತ್ತೆ ಯಾರೂ ಕೇಳುವವರಿಲ್ಲ. ಆದರೆ ನನ್ನನ್ನು ಗುರುತಿಸಿ ಸನ್ಮಾನಿಸಿದ್ದೀರಿ. ಇದು ನನಗೆ ಸಿಕ್ಕಿದ ಸನ್ಮಾನ ಅಲ್ಲ. ಕುರಿಯ ಮನೆತನಕ್ಕೆ ಸಿಕ್ಕಿದ ಸನ್ಮಾನ ಎಂದರು. ನಾನು ಏನೂ ಸಾಧನೆ ಮಾಡಿದವನಲ್ಲ. ನನ್ನ ಮೂಲಕ ನನ್ನ ಹಿರಿಯರನ್ನು, ಕುರಿಯ ಮನೆತನವನ್ನು ಗೌರವಿಸಿದ್ದೀರಿ. ಇದು ಮನಸ್ಸಿಗೆ ತುಂಬಾ ಸಂತೋಷ. ನನಗೆ ಮರುಜನ್ಮ ಇದ್ದರೆ ಕುರಿಯ ಮನೆತನದಲ್ಲಿಯೇ ಹುಟ್ಟಬೇಕು ಎಂದರು.

ಕಲಾಸೇವೆ ಮಾಡುವ ಅವಕಾಶ ಸಿಗಲಿ-ನನ್ಯ ಅಚ್ಯುತ ಮೂಡೆತ್ತಾಯ: ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ ಇವತ್ತು ಒಂದು ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ. ಇದು ನನಗೆ ಸಿಕ್ಕಿದ ಭಾಗ್ಯ. ಅನೇಕ ಶಿಷ್ಯರನ್ನು ತಯಾರು ಮಾಡಿದ ಕೀರ್ತಿ ಗಣಪತಿ ಶಾಸ್ತ್ರಿರವರಿಗಿದೆ. ಅವರಿಗೆ ಕಲಾ ಸೇವೆ ಮಾಡುವ ಅವಕಾಶ ಇನ್ನೂ ಕೂಡ ಸಿಗಲಿ ಎಂದರು.

ಸನ್ಮಾನ ಮಾಡುವ ಭಾಗ್ಯ ಸಿಕ್ಕಿದೆ-ಅರ್ಚಕ ಕೃಷ್ಣ ಉಪಾಧ್ಯಾಯ: ಮಧೂರು ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ.ಕೃಷ್ಣ ಉಪಾಧ್ಯಾಯ ಮಾತನಾಡಿ ನನಗೆ ಸನ್ಮಾನ ಮಾಡುವ ಭಾಗ್ಯ ಸಿಕ್ಕಿದೆ. ಅವರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಜಿ.ಕೆ.ಮಹಾಬಲೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹನುಮಗಿರಿ ಕ್ಷೇತ್ರದ ದರ್ಮದರ್ಶಿ ಶಿವರಾಮ ಶರ್ಮ ಅಭಿನಂದನಾ ಭಾಷಣ ಮಾಡಿದರು. ಹರೀಶ್ ಬಳಂತಿಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಕ್ಷೇತ್ರದ ದರ್ಮದರ್ಶಿ ಶಿವರಾಮ ಪಿ. ವಂದಿಸಿದರು. ಬಳಿಕ ಹನುಗಿರಿ ಮೇಳದವರಿಂದ ಕುಮಾರ ವಿಜಯ ಪಾರಂಪರಿಕ ಯಕ್ಷಗಾನ ನಡೆಯಿತು.

ಭಾಗವತ ಕುರಿಯ ಗಣಪತಿ ಶಾಸ್ತ್ರಿರವರಿಗೆ ಅಭಿನಂದನೆ
ಹನಮಗಿರಿ ಕ್ಷೇತ್ರದ ವತಿಯಿಂದ ಮಧೂರು ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಕೃಷ್ಣ ಉಪಾಧ್ಯಾಯರವರು ಭಾಗವತ ಕುರಿಯ ಗಣಪತಿ ಶಾಸ್ತ್ರಿರವರನ್ನು ಶಲ್ಯ, ಪೇಟ, ಹಾರ, ಫಲತಾಂಬೂಲ, ಅಭಿನಂದನಾ ಫಲಕ, ಬೃಹತ್ ದೀಪ ನೀಡಿ ಸನ್ಮಾನಿಸಿ ಗಾನಗಾರುಡಿ ಬಿರುದು ಪ್ರದಾನ ಮಾಡಲಾಯಿತು. ಬಳಿಕ ಗಣಪತಿ ಶಾಸ್ತ್ರಿಗಳ ಅಭಿಮಾನಿಗಳು ಹಾರ ಹಾಕಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here