ಕೋಟಿ ಚೆನ್ನಯ ಜೋಡು ಕರೆ ಕಂಬಳದ ಕರೆ ಮುಹೂರ್ತ

0

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳವು ಜ.27 ಮತ್ತು 28ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು ಕಂಬಳದ ಕರೆ ಮುಹೂರ್ತ ಡಿ.28ರಂದು ಪುತ್ತೂರು ಮಹಾಲಿಂಗೇಶ್ವರ ದೇವರಮಾರುಗದ್ದೆಯಲ್ಲಿ ನಡೆಯಿತು.


ಕಂಬಳವು ಯಶಸ್ವಿಯಾಗಿ ನೆರವೇರಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರಂಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಗದ್ದೆಯಲ್ಲಿರುವ ಮೂಲ ನಾಗನ ಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಕರೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಅವರು ಕಂಬಳದ ಕರೆಯನ್ನು ಅಗೆಯುವ ಮೂಲಕ ಕರೆ ಮುಹೂರ್ತ ಮಾಡಿದರು.

ಬಳಿಕ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡ ಇತಿಹಾಸ ಪ್ರಸಿದ್ಧ ಜಾನಪದ ಕ್ರೀಡೆಗಳಲ್ಲೊಂದಾದ ಪುತ್ತೂರು ಕೋಟಿ ಚೆನ್ನಯ ಕಂಬಳವು ಬಹಳ ಪ್ರಸಿದ್ಧಿ ಪಡೆದಿದ್ದು ಈ ಕಂಬಳವನ್ನು ವೀಕ್ಷಿಸಲು ದೇಶದ ನಾನಾ ಭಾಗಗಳಿಂದ ಜನರಾಗಮಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ ಎಂದು ಹೇಳಿ,ಕಂಬಳವು ಯಶಸ್ವಿಯಾಗಿ ನೆರವೇರಲು ಎಲ್ಲಾ ಸದಸ್ಯರು ಶಕ್ತಿ ಮೀರಿ ದುಡಿಯುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಸಂಚಾಲಕ ವಸಂತ ಕುಮಾರ್ ರೈ ಜೆ.ಕೆ., ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ಸುದರ್ಶನ್ ನಾಕ್ ಕಂಪ, ಜಿನ್ನಪ್ಪ ಪೂಜಾರಿ ಮುರ, ವಿವಿಧ ಪದಾಽಕಾರಿಗಳಾದ ಶಿವರಾಮ ಆಳ್ವ ಕುರಿಯ,ಪ್ರೇಮಾನಂದ ನಾಕ್, ಜೋಕಿಂ ಡಿ’ಸೋಜ, ರಂಜಿತ್ ಬಂಗೇರ, ಶಶಿಕಿರಣ್ ರೈ ನೂಜಿಬೈಲು, ಕೃಷ್ಣಪ್ರಸಾದ್ ಆಳ್ವ, ಗಂಗಾಧರ ಶೆಟ್ಟಿ ಕೈಕಾರ, ರೋಶನ್ ರೈ ಬನ್ನೂರು, ವಿಕ್ರಂ ಶೆಟ್ಟಿ ಅಂತರ, ಶಿವಪ್ರಸಾದ್ ರೈ ಮಠಂತಬೆಟ್ಟು, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಹಾಸ ಶೆಟ್ಟಿ ಬನ್ನೂರು, ಭಾಸ್ಕರ ಗೌಡ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಜೆ.ಪಿ. ಸಂತೋಷ್ ಕುಮಾರ್ ಮುರ, ಸುಶಾಂತ್ ರೈ ಕಂಬಳಬೆಟ್ಟು, ಸುಮಿತ್ ಶೆಟ್ಟಿ ಅಳಕೆಮಜಲು, ಪ್ರವೀಣ್ ಶೆಟ್ಟಿ ಅಳಕೆಮಜಲು, ನವೀನ್ ನಾಕ್ ಬೆದ್ರಾಳ, ಚಂದ್ರಶೇಖರ ಶೆಟ್ಟಿ ಬನ್ನೂರು, ಜತಿನ್ ನಾಕ್ ಕಂಪ, ಉಮೇಶ್ ಕರ್ಕೇರ, ಶಶಿಕುಮಾರ್ ನೆಲ್ಲಿಕಟ್ಟೆ, ವಿನಯ ಕುಮಾರ್ ಸವಣೂರು, ಉಮಾಶಂಕರ್ ಪಾಂಗಳಾಯಿ,ಕೃಷ್ಣ ನಾಯ್ಕ, ಪೂರ್ಣೇಶ್ ಭಂಡಾರಿ, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಅಭಿಜಿತ್ ಬೆಳ್ಳಿಪ್ಪಾಡಿ, ಲೋಕೇಶ್ ಪಡ್ಡಾಯೂರು, ದಾಮೋದರ್ ಮುರ, ಮಂಜುನಾಥ ಗೌಡ ತೆಂಕಿಲ, ಕಿರಣ್ ಡಿ’ಸೋಜಾ ಬನ್ನೂರು, ಶಿವಕುಮಾರ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಂತ ಕಲ್ಲೇಗ,ಸನತ್ ಕುಮಾರ್ ರೈ ಏಳ್ನಾಡ್‌ಗುತ್ತು, ಬಾಲಕೃಷ್ಣ, ಯೋಗೀಶ್ ಸಾಮಾನಿ, ಶರತ್ ಕೇಪುಳು, ರಾಮ ನಾಯ್ಕ ಪಾಣಾಜೆ, ವಿಜಯಕುಮಾರ್ ಕೋಡಿಂಬಾಡಿ, ಚಂದ್ರಶೇಖರ ರೈ, ಸನ್ಮಿತ್ ರೈ ಬನ್ನೂರು, ಪ್ರವೀಣ್ ಶೆಟ್ಟಿ, ಪ್ರಶಾಂತ್ ಸಪಲ್ಯ ಮುರ, ಪ್ರವೀಣ್ ಕುಮಾರ್ ಅಳಕೆಮಜಲು, ರಮೇಶ್ ಪೂಜಾರಿ ಬನ್ನೂರು, ವಿಜೇತ್ ಗೌಡ, ಗೌರಿಶಂಕರ್ ರೈ, ಚಂದ್ರಶೇಖರ ಪಾಲ್ತಾಡಿ, ಸುಧಾಕರ ಆಚಾರ್ಯ, ವಿಕ್ರಂ ಆಳ್ವ, ಜನಾರ್ದನ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here