*ಎನ್.ಎಫ್.ಸಿ ಕುಂಬ್ರ ವಿನ್ನರ್ಸ್, ಯಂಗ್ ಸ್ಟಾರ್ ವಾಮದಪದವು ರನ್ನರ್ಸ್
*ಹಳ್ಳಿ ಹುಡುಗ್ರು ಪೇಟೆ ಕಪ್-ಎಫ್.ಸಿ.ಟಿ ಪುತ್ತಿಗೆ ವಿನ್ನರ್ಸ್, ವೈ.ಎಫ್.ಸಿ ಮುಕ್ವೆ ರನ್ನರ್ಸ್
*ಕಿಲ್ಲೆ ಕಪ್-ಕಮೆಂಟೇಟರ್ಸ್ ವಿನ್ನರ್ಸ್, ಬಜಾಜ್ ಫೈನಾನ್ಸ್ ರನ್ನರ್ಸ್
*ಸ್ನೇಹ ಸೌಹಾರ್ದ ಟ್ರೋಫಿ-ದೈ.ಶಿ.ಶಿ ವಿನ್ನರ್ಸ್, ವಕೀಲರು ರನ್ನರ್ಸ್
ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಯ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ, ತುಳುನಾಡು ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಜಂಟಿ ಆಶ್ರಯದಲ್ಲಿ ಕಿಲ್ಲೆ ಮೈದಾನದಲ್ಲಿ ಜರಗಿದ ಜಾತಿ-ಜಾತಿ ಮಧ್ಯೆ ಸೌಹಾರ್ದತೆಯ ಸಾಮರಸ್ಯ ಮೂಡಿಸುವ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 13ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ-2023 ಡಿ.19 ರಿಂದ 24ರ ತನಕ ಆರು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಅಹರ್ನಿಶಿಯಾಗಿ ಜರಗಿದ್ದು ಯಶಸ್ವಿಯಾಗಿ ಸಂಪನ್ನ ಕಂಡಿದೆ.
ಅಮರ್ ಅಕ್ಬರ್ ಅಂತೋನಿ ಟ್ರೋಫಿ ಪಂದ್ಯಾಟದಲ್ಲಿ ಎನ್.ಎಫ್.ಸಿ ಕುಂಬ್ರ ಚಾಂಪಿಯನ್ ಆಗಿ ಮೂಡಿ ಬಂದಿದ್ದು, ಯಂಗ್ ಸ್ಟಾರ್ ವಾಮದಪದವು ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು. ಬೆಸ್ಟ್ ಬ್ಯಾಟರ್ ಆಗಿ ಎನ್.ಎಫ್.ಸಿ ಕುಂಬ್ರ ತಂಡದ ಅಲ್ತಾಫ್, ಬೆಸ್ಟ್ ಬೌಲರ್ ಎನ್.ಎಫ್.ಸಿ ಕುಂಬ್ರದ ಸಂದೀಪ್ ಕಾರ್ಕಳ, ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಎನ್.ಎಫ್.ಸಿ ಕುಂಬ್ರ ತಂಡದ ಶಾಫಿ ಪುಣಚ, ಸರಣಿಶ್ರೇಷ್ಟ ಪ್ರಶಸ್ತಿಯನ್ನು ಯಂಗ್ ಸ್ಟಾರ್ ವಾಮದಪದವು ತಂಡದ ಹಾರೀಶ್ , ಉತ್ತಮ ಕ್ಯಾಚ್ ಅನ್ನು ನೌಶಾದ್ ಗೋಳಿಯಂಗಡಿರವರು ಪಡೆದುಕೊಂಡರು.
ಹಳ್ಳಿ ಹುಡುಗ್ರು ಪೇಟೆ ಕಪ್ ಪಂದ್ಯಾಟದಲ್ಲಿ ಎಫ್.ಸಿ.ಟಿ ಪುತ್ತಿಗೆ ತಂಡವು ಚಾಂಪಿಯನ್, ವೈ.ಎಫ್.ಸಿ ಮುಕ್ವೆ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು. ಉತ್ತಮ ಬ್ಯಾಟರ್ ಆಗಿ ಎಫ್.ಸಿ.ಟಿ ಪುತ್ತಿಗೆ ತಂಡದ ಅಝೀಮ್, ಉತ್ತಮ ಬೌಲರ್ ಆಗಿ ವೈ.ಎಫ್.ಸಿ ಮುಕ್ವೆ ತಂಡದ ನಿಶಾಂತ್, ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಎಫ್.ಸಿ.ಟಿ ಪುತ್ತಿಗೆ ತಂಡದ ಪ್ರಮೋದ್, ಸರಣಿಶ್ರೇಷ್ಟ ಪ್ರಶಸ್ತಿಯನ್ನು ವೈ.ಎಫ್.ಸಿ ಮುಕ್ವೆ ತಂಡದ ಮಸೂದ್ ಪಡೆದುಕೊಂಡರು.
ಕಿಲ್ಲೆ ಕಪ್ ಪಂದ್ಯಾಟದಲ್ಲಿ ಕಮೆಂಟೇಟರ್ಸ್ ತಂಡವು ವಿನ್ನರ್ಸ್ ಆಗಿಯೂ, ಬಜಾಜ್ ಫೈನಾನ್ಸ್ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡರು. ವಿವಿಧ ಇಲಾಖೆಗಳ ಸ್ನೇಹ ಸೌಹಾರ್ದ ಟ್ರೋಫಿ ಪಂದ್ಯಾಟದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ತಂಡವು ವಿನ್ನರ್ಸ್ ಆಗಿಯೂ, ವಕೀಲರ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಹಕಾರಿ ಬ್ಯಾಂಕ್, ಗೃಹರಕ್ಷಕ ದಳ, ಕೆ.ಎಸ್.ಆರ್.ಟಿ.ಸಿ, ಸುದ್ದಿ ಬಿಡುಗಡೆ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ತಂಡ, ಮೆಸ್ಕಾಂ ತಂಡ ಹೀಗೆ 10 ತಂಡಗಳು ಭಾಗವಹಿಸಿದ್ದವು.
ಸಮಾರೋಪ:
ಈ ಆರು ದಿನಗಳ ಪಂದ್ಯಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ,
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್.ಕೆ ಜಗನ್ನೀವಾಸ್ ರಾವ್, ಕೇಂದ್ರ ಜುಮಾ ಮಸೀದಿಯ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಎಪಿಎಂಸಿ ಡಾಯಸ್ ಕಾಂಪ್ಲೆಕ್ಸ್ ಮಾಲಕ ದೀಪಕ್ ಡಾಯಸ್, ಸರ್ಜನ್ ಡಾ.ಪ್ರದೀಪ್ ಕುಮಾರ್, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ರೋಶನ್ ರೆಬೆಲ್ಲೋ ಸಿಝ್ಲರ್, ವಿ.ಕೆ ಶರೀಪ್ ಬಪ್ಪಳಿಗೆ, ಮೋನು ಬಪ್ಪಳಿಗೆ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು.
ಅಂಪೈರ್ಸ್ ಗಳಾಗಿ ಇಮ್ರಾನ್ ಉಪ್ಪಿನಂಗಡಿ, ಪುರುಷೋತ್ತಮ್ ಬೆಳ್ಳಾರೆ, ಸಲೀಂ ಬಪ್ಪಳಿಗೆ, ಫಾರೂಕ್ ಕುಂಬ್ರ, ವೀಕ್ಷಕ ವಿವರಣೆಗಾರರಾಗಿ ನಿಝಾರ್ ಶೈನ್ ಸುಳ್ಯ, ಅನಸ್ ಕನಕಮಜಲು, ಶಾಫಿ ಪರ್ಪುಂಜ, ಪರ್ವೀಝ್ ರವರು ಸಹಕರಿಸಿದರು. ಮುಖ್ಯ ಸಂಘಟಕ ರಝಾಕ್ ಬಿ.ಎಚ್ , ಸಹ ಸಂಘಟಕರಾದ ಅರುಣ್ ಬಪ್ಪಳಿಗೆ, ಸಾದಿಕ್ ಬಪ್ಪಳಿಗೆ ರವರ ಸಂಘಟನೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಪರಸ್ಪರ ಸಾಮರಸ್ಯ ಮೂಡಿಸುವ ಕ್ರಿಕೆಟ್…
ಕಳೆದ ಹಲವು ವರ್ಷಗಳಿಂದ ಈ ಕಿಲ್ಲೆ ಮೈದಾನದಲ್ಲಿ ಜಾತಿ-ಜಾತಿ ಮಧ್ಯೆ ಸಾಮರಸ್ಯ ಮೂಡಿಸುವ ಸಲುವಾಗಿ ಅಮರ್ ಅಕ್ಬರ್ ಅಂತೋನಿ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದಾರೆ. ಹೆಸರೇ ಸೂಚಿಸಿದ ಹಾಗೆ ಈ ಪಂದ್ಯಾಕೂಟದಲ್ಲಿ ಎಲ್ಲಾ ಜಾತಿಯವರು ಕ್ರಿಕೆಟ್ ಆಡುತ್ತಿರುವುದು
ಯಶಸ್ಸಿನ ಸಂಕೇತವಾಗಿದೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ಈ ಸಂದರ್ಭದಲ್ಲಿ ಸರ್ಫಿಂಗ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ತ್ಯುತ್ತಮ ಸಾಧನೆಗೈದ ಸಿಂಚನಾ ಡಿ.ಗೌಡರವರನ್ನು ಗುರುತಿಸಿ ಸಂಘಟಕರ ವತಿಯಿಂದ ಸನ್ಮಾನಿಸಲಾಯಿತು.
ಕೈ ತಪ್ಪಿದ ರೋಲಿಂಗ್ ಟ್ರೋಫಿ…
ಸಂಘಟಕರ ಆಯೋಜನೆಯಂತೆ ಅಮರ್ ಅಕ್ಬರ್ ಅಂತೋನಿ ಪಂದ್ಯಾಟದಲ್ಲಿ ಯಾರು ಸತತ ಮೂರು ಬಾರಿ ವಿಜೇತರಾಗುತ್ತಾರೋ ಅವರಿಗೆ ರೋಲಿಂಗ್ ಟ್ರೋಫಿಯನ್ನು ಶಾಶ್ವತವಾಗಿ ನೀಡುವುದಾಗಿತ್ತು. ಆದರೆ ಕಳೆದ ಎರಡು ಅವಧಿಯಲ್ಲಿ ಚಾಂಪಿಯನ್ ಎನಿಸಿಕೊಂಡ ಯಂಗ್ ಸ್ಟಾರ್ ವಾಮದಪದವು ತಂಡವು ಕೂದಳೆಲೆಯ ಅಂತರದಿಂದ ಸೋಲೋಪ್ಪಿಕೊಂಡು ಸತತ ಮೂರನೇ ಬಾರಿಯ ಜಯದಿಂದ ರೋಲಿಂಗ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಕೈತಪ್ಪಿದೆ.