ದ.ಕ ಗಾಣಿಗ-ಪಾಟಾಳಿ/ವಾಣಿಯನ್‌ ಸಭೆ-ನೂತನ ಸಂಘ ರಚನೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ-ಪಾಟಾಳಿ/ವಾಣಿಯನ್ ಸಮುದಾಯ ಇದರ ಜಿಲ್ಲಾ ಮಟ್ಟದ ಸಭೆಯು ಪುತ್ತೂರಿನ ಈಶ ವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯು ವಾಣಿಯ/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಂಗಳೂರು ಗಾಣಿಗ-ಪಾಟಾಳಿ/ವಾಣಿಯನ್ ಸಮುದಾಯ ಸೇವಾ ಸಂಘದ ನೂತನ ಜಿಲ್ಲಾ ಸಂಘವನ್ನು ರಚಿಸಲಾಯಿತು.

ಜಿಲ್ಲಾ ಸಂಘದ ಗೌರವಾಧ್ಯಕ್ಷರಾಗಿ ಶಂಕರ ಪಾಟಾಳಿ ಪರಿವಾರಕಾನ ಸುಳ್ಯ, ಅಧ್ಯಕ್ಷರಾಗಿ ರಾಮ ಮುಗ್ರೋಡಿ ಮಂಗಳೂರು, ಉಪಾಧ್ಯಕ್ಷರುಗಳಾಗಿ ಶಾರದಾಕೃಷ್ಣ ಈಶ ಪುತ್ತೂರು ಹಾಗೂ ಉದಯ ಕುಮಾರ್ ದಂಬೆ ವಿಟ್ಳ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಲಿಂಗನ್ ಬಾಜರ್ತೊಟ್ಟಿ ಸುಳ್ಯ, ಕೋಶಾಧಿಕಾರಿಯಾಗಿ ಸುಬ್ಬಪ್ಪ ಪಟ್ಟೆ ಪುತ್ತೂರು, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ ಸುಳ್ಯ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ದಿನಕರ ಅಳಿಕೆ‌ ವಿಟ್ಲ ಮತ್ತು ಕೇಶವ ಕೋರಿಗದ್ದೆ ಈಶ್ವರಮಂಗಲ ಇವರನ್ನು ಆಯ್ಕೆ ಮಾಡಲಾಯಿತು.

ಸಂಘದ ಗೌರವ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಚಂದ್ರಶೇಖರ ಉದ್ದಂತಡ್ಕ ಸುಳ್ಯ , ನಿರ್ದೇಶಕರಾಗಿ ಬಾಲಕೃಷ್ಣ ಯಸ್ ಮಂಗಳೂರು, ನಾರಾಯಣ ಮಂಜನಾಡಿ ಮಂಗಳೂರು, ಕೃಷ್ಣ ಡಿ ಯಸ್ ಮಂಗಳೂರು, ಉದಯ ಕುಮಾರ್ ಗೋರಿಗುಡ್ಡೆ ಮಂಗಳೂರು, ಪ್ರವೀಣ್ ಜಯನಗರ ಸುಳ್ಯ, ಸುರೇಶ್ ಕರ್ಲಪ್ಪಾಡಿ ಸುಳ್ಯ, ವಿಜಯ ಕುಮಾರ್ ಎರ್ಮೇಟ್ಟಿ ಸುಳ್ಯ, ನವೀನ್ ಪಾದೆಕಲ್ಲು ವಿಟ್ಲ, ಸುಬ್ಬ ಮೂಡಂಬೈಲು ವಿಟ್ಲ, ನಾಗೇಶ್ ಪೆರುವಾಯಿ ವಿಟ್ಲ, ದಾಮೋದರ ಪುತ್ತೂರು, ಪ್ರಸಾದ್ ಕಲ್ಲರ್ಪೆ ಪುತ್ತೂರು, ತಿಮ್ಮಪ್ಪ ಪಾಟಾಳಿ ಪುತ್ತೂರು, ಮಹಾಲಿಂಗ ಪಂಚೋಡಿ ಈಶ್ವರಮಂಗಲ, ಆನಂದ ಏರಾಜೆ ಈಶ್ವರಮಂಗಲ, ಪ್ರದೀಪ್ ಪಟ್ಟುಮೂಲೆ ಈಶ್ವರಮಂಗಲ, ರಾಜೇಶ್ ಡಿ ಈಶ್ವರಮಂಗಲ ಇವರನ್ನು ಆಯ್ಕೆ ಮಾಡಲಾಯಿತು.ಶಂಕರ ಪಾಟಾಳಿ ಪರಿವಾರಕಾನ ಸ್ವಾಗತಿಸಿ, ನಿರೂಪಿಸಿದರು. ಚಂದ್ರಶೇಖರ ಪನ್ನೆ ವಂದಿಸಿದರು.

LEAVE A REPLY

Please enter your comment!
Please enter your name here